ಅಮರಾವತಿ:ಇತ್ತೀಚೆಗೆ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ತೆಲುಗು ದೇಶಂ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ.
ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ವೈ.ಎಸ್ ಚೌಧರಿ, ಸಿ.ಎಂ ರಮೇಶ್, ಟಿ.ಜಿ ವೆಂಕಟೇಶ್ ಮತ್ತು ಜಿ. ಮೋಹನ್ ರಾವ್ ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ, ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪ್ರಧಾನಿ ಮೋದಿ ನಾಯಕತ್ವದಿಂದ ಸಾಕಷ್ಟು ಪ್ರಭಾವಿತರಾಗಿದ್ದು, ಮೋದಿ ಅಭಿವೃದ್ಧಿ ನಡೆಯನ್ನು ಇಷ್ಟಪಟ್ಟು ಬಿಜೆಪಿ ಸೇರುತ್ತಿರುವುದಾಗಿ ಪಕ್ಷ ತೊರೆದ ಸಂಸದರು ಹೇಳಿದ್ದಾರೆ.