ಕರ್ನಲ್(ಹರಿಯಾಣ):12 ವರ್ಷದ ಅಪ್ರಾಪ್ತೆ ಮೇಲೆ ನಾಲ್ವರು ಆರೋಪಿಗಳು ಅತ್ಯಾಚಾರವೆಸಗಿದ ಘಟನೆ ಹರಿಯಾಣದ ಕರ್ನಲ್ ನಗರದಲ್ಲಿ ನಡೆದಿದೆ.
ಅಪ್ರಾಪ್ತೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಬಂಧನ - Haryana crime news
ದೇಶದಲ್ಲಿ ಮೇಲಿಂದ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. 12 ವರ್ಷದ ಅಪ್ರಾಪ್ತೆ ಮೇಲೆ ನಾಲ್ವರು ಆರೋಪಿಗಳು ಅತ್ಯಾಚಾರವೆಸಗಿದ ಘಟನೆ ಹರಿಯಾಣದ ಕರ್ನಲ್ ನಗರದಲ್ಲಿ ನಡೆದಿದೆ. ಪ್ರಕರಣ ದಾಖಲಿಸಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಪ್ರಾಪ್ತೆ ಮೇಲೆ ನಾಲ್ವರಿಂದ ಅತ್ಯಾಚಾರ
ಅತ್ಯಾಚಾರದ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಅಪ್ರಾಪ್ತೆ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ಇನ್ನಷ್ಟೇ ನಡೆಸಬೇಕಿದೆ ಎಂದು ಕರ್ನಲ್ ಪೊಲೀಸರು ತಿಳಿಸಿದ್ದಾರೆ. ದೇಶದಲ್ಲಿ ಮೇಲಿಂದ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮಹಿಳೆಯರು ಹಾಗೂ ಅಪ್ರಾಪ್ತೆಯರಿಗೂ ರಕ್ಷಣೆ ಇಲ್ಲದಂತಾಗಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕಿದೆ ಎನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.
Last Updated : Dec 12, 2019, 11:06 AM IST