ಕರ್ನಾಟಕ

karnataka

ETV Bharat / bharat

ಲೋನ್ ಆ್ಯಪ್‌ ಪ್ರಕರಣ; ಚೀನೀಯರು ಸೇರಿ ನಾಲ್ವರ ಬಂಧನ - ಚೆನ್ನೈ ಪೊಲೀಸರು

ಆನ್‌ಲೈನ್ ಲೋನ್​ ಅಪ್ಲಿಕೇಶನ್ ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿದರದೊಂದಿಗೆ ಸಾಲ ಮರುಪಾವತಿ ಮಾಡುವ ಮೂಲಕ ವ್ಯಕ್ತಿಯೊಬ್ಬನಿಗೆ ನಿಂದನೆ, ಬೆದರಿಕೆ ಮತ್ತು ಕಿರುಕುಳ ದೂರು ಹಿನ್ನೆಲೆಯಲ್ಲಿ ಇಬ್ಬರು ಚೀನೀಯರು ಸೇರಿದಂತೆ ಅನೇಕ ಭಾರತೀಯರನ್ನು ಈ ಹಿಂದೆ ಬಂಧಿಸಲಾಗಿತ್ತು.

loan apps
ಲೋನ್ ಆ್ಯಪ್

By

Published : Jan 7, 2021, 6:55 AM IST

ಚೆನ್ನೈ: ಲೋನ್ ಆ್ಯಪ್‌ ನಿರ್ವಹಣಾ ಸಂಬಂಧಿತ ಪ್ರಕರಣದಲ್ಲಿ ಚೆನ್ನೈ ಪೊಲೀಸರು ಚೀನಾದ ಪ್ರಜೆಗಳು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ 1,000 ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್ ಸೇವಾ ಪೂರೈಕೆದಾರರ ಉದ್ಯೋಗಿಯನ್ನೂ ಬಂಧಿಸಲಾಗಿದೆ.

ಆನ್‌ಲೈನ್ ಲೋನ್​ ಅಪ್ಲಿಕೇಶನ್ ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿದರದೊಂದಿಗೆ ಸಾಲ ಮರುಪಾವತಿ ಮಾಡುವ ಮೂಲಕ ವ್ಯಕ್ತಿಯೊಬ್ಬನಿಗೆ ನಿಂದನೆ, ಬೆದರಿಕೆ ಮತ್ತು ಕಿರುಕುಳ ನೀಡಿದ್ದರ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಇಬ್ಬರು ಚೀನೀಯರು ಸೇರಿದಂತೆ ಅನೇಕ ಭಾರತೀಯರನ್ನು ಈ ಹಿಂದೆ ಬಂಧಿಸಲಾಗಿತ್ತು.

ಆರೋಪಿಗಳು 1,100 ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಬಂಧಿತ ಚೀನಿಯರಿಗೆ ಹಸ್ತಾಂತರಿಸಿದ್ದಾರೆ ಎಂದು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ. ಸಿಮ್ ಕಾರ್ಡ್‌ಗಳ ವಿತರಣೆಯಲ್ಲಿ ಅಗತ್ಯವಾದ ಕಾರ್ಯವಿಧಾನವನ್ನು ಅನುಸರಿಸಲಾಗಿಲ್ಲ ಎಂದು ತನಿಖೆಯನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ನಕಲಿ 'CoWIN' ಅಪ್ಲಿಕೇಶನ್‌ಗಳ ಬಗ್ಗೆ ಕೇಂದ್ರ ಸರ್ಕಾರದ ಎಚ್ಚರಿಕೆ

ಲೋನ್​ ಅಪ್ಲಿಕೇಶನ್ ಕಾರ್ಯಭಾಗವಾಗಿ ಬಳಸಲಾಗುವ ಇಂತಹ ಸಿಮ್​ ಕಾರ್ಡ್​ಗಳ ಫೋನ್​ ಸಂಖ್ಯೆಗಳನ್ನು ಸಾಲ ಮರುಪಾವತಿಸಲು ಸಾಧ್ಯವಾಗದ ವ್ಯಕ್ತಿಗೆ ಕರೆ ಮಾಡಿ ಬೆದರಿಸಲು ಮತ್ತು ನಿಂದಿಸಲು ಬಳಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ABOUT THE AUTHOR

...view details