ಕರ್ನಾಟಕ

karnataka

ETV Bharat / bharat

ಪವಾಡಸದೃಶವೆಂಬಂತೆ ಕೊರೊನಾ ಸೇರಿ ಎರಡು ಕಾಯಿಲೆಗಳಿಂದ 4 ತಿಂಗಳ ಮಗು ಗುಣಮುಖ! - ಪಶ್ಚಿಮ ಬಂಗಾಳದ ಹೂಗ್ಲಿ

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಾಲ್ಕು ತಿಂಗಳ ಮಗುವೊಂದು ಕೊರೊನಾ ಮತ್ತು ಕವಾಸಕಿ ಕಾಯಿಲೆಯಿಂದ ಗುಣಮುಖವಾಗಿದ್ದು, ಈ ಪ್ರಕರಣವನ್ನು ಇಂಡಿಯನ್ ಪೀಡಿಯಾಟ್ರಿಕ್ ಅಸೋಸಿಯೇಶನ್ ಜರ್ನಲ್ ಮತ್ತು ಇಂಡಿಯನ್ ಪೀಡಿಯಾಟ್ರಿಕ್​​ನ ಆನ್‌ಲೈನ್ ಆವೃತ್ತಿಯಲ್ಲಿ ಪ್ರಕಟಿಸಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

COVID-19
ಕೊರೊನಾ ಸೇರಿ ಎರಡು ಕಾಯಿಲೆಗಳಿಂದ 4 ತಿಂಗಳ ಮಗು ಗುಣಮುಖ

By

Published : Jun 1, 2020, 9:47 AM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ):ಪವಾಡ ಸದೃಶ್ಯವೆಂಬಂತೆ ನಾಲ್ಕು ತಿಂಗಳ ಮಗುವೊಂದು ಎರಡು ಕಾಯಿಲೆಗಳನ್ನು ಗೆದ್ದು ಅವುಗಳಿಂದ ಹೊರಬಂದಿದೆ.

ಹೌದು, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕೊರೊನಾ ಮತ್ತು ಕವಾಸಕಿ ಕಾಯಿಲೆಯಿಂದ ಮಗು ಗುಣಮುಖವಾಗಿದೆ. ಮೊದಲ ಬಾರಿಗೆ ಇಂತಹ ಎರಡು ಮಹಾಮಾರಿ ಕಾಯಿಲೆಗಳಿಂದ ಚೇತರಿಕೆ ಕಂಡ ವಿಶ್ವದ ಮೊದಲ ಮಗು ಇದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

4 ತಿಂಗಳ ಈ ಗಂಡು ಮಗುವನ್ನು ಕೋಲ್ಕತ್ತಾದ ಮುಕುಂದಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಅದು ವಿಪರೀತ ಜ್ವರದಿಂದ ಬಳಲುತ್ತಿತ್ತು. ಅಲ್ಲದೆ, ಕೊರೊನಾ ಪಾಸಿಟಿವ್​ ಸಹ ಇತ್ತು. ಈ ಸಮಸ್ಯೆಯಿಂದ ಮಗು ನಿರಂತರವಾಗಿ ಅಳುತ್ತಿತ್ತು. ಚಿಕಿತ್ಸೆ ಬಳಿಕ ಕೆಲವೇ ದಿನಗಳಲ್ಲಿ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂತು. ಅಲ್ಲಿಂದ ಕೋಲ್ಕತ್ತಾ ವೈದ್ಯಕೀಯ​ ಕಾಲೇಜು ಮತ್ತು ಆಸ್ಪತ್ರೆಗೆ ಕಳಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಮಗು ಚೇತರಿಸಿಕೊಂಡಿದೆ. ಕೊರೊನಾ ವರದಿ ಸಹ ನೆಗೆಟಿವ್​ ಬಂದಿದೆ.

10 ದಿನಗಳಲ್ಲಿ ಮಗು ಸಂಪೂರ್ಣ ಗುಣಮುಖವಾಗಿದೆ. ಈ ಪ್ರಕರಣವನ್ನು ಇಂಡಿಯನ್ ಪೀಡಿಯಾಟ್ರಿಕ್ ಅಸೋಸಿಯೇಶನ್ ಜರ್ನಲ್ ಮತ್ತು ಇಂಡಿಯನ್ ಪೀಡಿಯಾಟ್ರಿಕ್​​ನ ಆನ್‌ಲೈನ್ ಆವೃತ್ತಿಯಲ್ಲಿ ಪ್ರಕಟಿಸಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details