ಗ್ವಾಲಿಯರ್:ಕಳ್ಳತನಕ್ಕೆ ಇಳಿಯುವವರು ಪೊಲೀಸರಿಂದ ತಪ್ಪಿಸಿಕೊಂಡು ತಮ್ಮ ಕೆಲಸವನ್ನು ಸುಲಭವಾಗಿಸಲು ನಾನಾ ಮಾರ್ಗ ಹಿಡಯುತ್ತಾರೆ. ಆದರೆ ಈ ಪ್ರಕರಣದಲ್ಲಿ ಐನಾತಿ ಕಳ್ಳರ ವಾಮಮಾರ್ಗದಲ್ಲೂ ಅದ್ಭುತವಾಗಿ ತಲೆ ಖರ್ಚುಮಾಡಿದ್ದಾರೆ.
ಪೊಲೀಸರ ಅಧಿಕಾರಿಗಳೆಂದು ಹೇಳಿಕೊಂಡು ತಿರುಗಾಡುತ್ತಿದ್ದ ನಾಲ್ವರು ಇದನ್ನು ನಂಬಿಸುವ ಸಲುವಾಗಿ ನಕಲಿ ಪೊಲೀಸ್ ಠಾಣೆಯನ್ನೇ ನಿರ್ಮಿಸಿಕೊಂಡಿದ್ದರು. ಭಾರಿ ಐಡಿಯಾ ಮಾಡಿದ್ದ ಈ ಕಳ್ಳರು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ.