ಕರ್ನಾಟಕ

karnataka

ETV Bharat / bharat

ಸೆಣಬಿನ ಉಂಡೆಗಳು ಉರುಳಿ ಒಂದೇ ಕುಟುಂಬದ ನಾಲ್ವರು ಸಾವು! - ಸೆಣಬಿನ ಉಂಡೆಗಳು

ಸೆಣಬಿನ ವ್ಯಾಪಾರ ನಡೆಸುತ್ತಿದ್ದ ಭಾರತದ ಮೂಲದ ಕುಟುಂಬದ ನಾಲ್ವರು ಸದಸ್ಯರು ನೇಪಾಳದಲ್ಲಿ ಮೃತಪಟ್ಟಿರುವ ಘಟನೆ ಕಠ್ಮುಂಡುವಿನಲ್ಲಿ ನಡೆದಿದೆ.

ಒಂದೇ ಕುಟುಂಬದ ನಾಲ್ವರು ಸಾವು
ಒಂದೇ ಕುಟುಂಬದ ನಾಲ್ವರು ಸಾವು

By

Published : Jan 31, 2020, 4:20 PM IST

ಕಠ್ಮಂಡು(ನೇಪಾಳ):ಸೆಣಬಿನ ಚೀಲಗಳ ವ್ಯಾಪಾರ ಮಾಡುತ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನೇಪಾಳದಲ್ಲಿ ನಡೆದಿದ್ದು, ಸೆಣಬಿನ ಚೀಲದ ನೂರಾರು ಉಂಡೆಗಳು ಅವರ ಮೇಲೆ ಬಿದ್ದಿರುವ ಕಾರಣ ಈ ದುರ್ಘಟನೆ ನಡೆದಿದೆ.

ಒಂದೇ ಕುಟುಂಬದ ನಾಲ್ವರು ಸಾವು

ಶೆಹಜಾದ್​​ ತನ್ನ ಕುಟುಂಬದೊಂದಿಗೆ ನೇಪಾಳದ ಭೈರವಾಹದಲ್ಲಿ ವಾಸ ಮಾಡುತ್ತಿದ್ದು, ಸೆಣಬಿನ ವ್ಯಾಪಾರ ನಡೆಸುತ್ತಿದ್ದರು. ಬುಧವಾರ ರಾತ್ರಿ ಊಟ ಮಾಡಿ ಎಲ್ಲರೂ ಗೋಡೌನ್​​ನಲ್ಲಿ ಮಲಗಿದ್ದರು. ಈ ವೇಳೆ ಏಕಾಏಕಿ ನೂರಾರು ಸೆಣಬಿನ ಉಂಡೆಗಳು ಅವರು ಮೇಲೆ ಉರುಳಿ ಬಿದ್ದಿರುವ ಕಾರಣ ಮೇಲೆ ಏಳಲು ಆಗದೇ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಅಂಗಡಿಯಲ್ಲಿ ಕೆಲಸ ಮಾಡಲು ಬಂದ ಕಾರ್ಮಿಕರು ಅಂಗಡಿ ತೆರೆದು ನೋಡಿದಾಗ ಅಹಿತಕರ ಘಟನೆ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ಶಹಜಾದ್​ ಹುಸೇನ್​, ಪತ್ನಿ ಶಾದಾಬ್​ ಖತೂನ್​, ಮಗ ಸುಲ್ತಾನ್​​ ಮತ್ತು ಮಗಳು ಶಹೀನಾ ಖತುನ್​ ಸಾವನ್ನಪ್ಪಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಪಡೆದುಕೊಂಡು, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿ, ತದನಂತರ ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಿದ್ದಾರೆ.

ABOUT THE AUTHOR

...view details