ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಬದ್ಗಂ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಭಯೋತ್ಪಾದಕ ಗುಂಪಿನ ನಾಲ್ವರು ಸಹಚರರನ್ನು ಭದ್ರತಾ ಪಡೆ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಶೋಧ ಕಾರ್ಯಾಚರಣೆಯಲ್ಲಿ ಎಲ್‌ಇಟಿ ಉಗ್ರ ಸಂಘಟನೆಯ ಸಹಚರರನ್ನು ಬೀರ್ವಾ ತಹಸಿಲ್‌ನ ಪೆತ್‌ಕೂಟ್ ಗ್ರಾಮದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಲಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಾಲ್ವರನ್ನು ಪೆತ್‌ಕೂಟ್ ಗ್ರಾಮದ ನಿವಾಸಿಗಳಾದ ಶಕೀಲ್ ಅಹ್ಮದ್ ವಾನಿ ಹಾಗೂ ಶೋಕತ್ ಅಹ್ಮದ್, ಚೆರ್ವಾನಿ ಕ್ರಾರ್-ಎ-ಶರೀಫ್‌ನ ಅಕಿಬ್ ಮಕ್ಬೂಲ್ ಖಾನ್ ಮತ್ತು ಅಜಾಜ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.
ಎಲ್‌ಇಟಿ ಉಗ್ರರಿಗೆ ಆಶ್ರಯ ಮತ್ತು ವ್ಯವಸ್ಥಾಪನಾ ಬೆಂಬಲ ನೀಡುವಲ್ಲಿ ಈ ಗುಂಪು ಭಾಗಿಯಾಗಿತ್ತು ಎಂದು ತಿಳಿದು ಬಂದಿದೆ.
"ಬಂಧಿತರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರ ಮತ್ತು ಮದ್ದು-ಗುಂಡುಗಳಲ್ಲಿ ಎಕೆ-47 ಹಾಗೂ ಸ್ಫೋಟಕಗಳು ಸೇರಿವೆ" ಎಂದು ಪೊಲೀಸರು ತಿಳಿಸಿದ್ದಾರೆ.