ಕರ್ನಾಟಕ

karnataka

ETV Bharat / bharat

ರಾಸಾಯನಿಕ ತ್ಯಾಜ್ಯ ಟ್ಯಾಂಕ್ ಸ್ವಚ್ಛತೆ ವೇಳೆ ಅನಿಲ ಸೋರಿಕೆ: ನಾಲ್ವರು ಕಾರ್ಮಿಕರ ದುರ್ಮರಣ - ರಾಸಾಯನಿಕ ತ್ಯಾಜ್ಯ ಟ್ಯಾಂಕ್ ಸ್ವಚ್ಛತೆ ವೇಳೆ ಅನಿಲ ಸೋರಿಕೆ

ಧೋಲ್ಕಾ ಜಿಲ್ಲೆಯ ಜವಳಿ ಕಾರ್ಖಾನೆಯೊಂದರಲ್ಲಿ ರಾಸಾಯನಿಕ ತ್ಯಾಜ್ಯ ಟ್ಯಾಂಕ್ ಸ್ವಚ್ಛತೆ ವೇಳೆ ಕನಿಷ್ಠ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಿಲಾಗಿದ್ದು, ತನಿಖೆ ನಡೆಯುತ್ತಿದೆ.

4 labourers die while cleaning chemical waste tank in Ahmedabad
ಅನಿಲ ಸೋರಿಕೆ

By

Published : Jul 19, 2020, 3:36 AM IST

Updated : Jul 19, 2020, 6:09 AM IST

ಅಹಮದಾಬಾದ್ (ಗುಜರಾತ್):ಗುಜರಾತ್​ನಧೋಲ್ಕಾ ಜಿಲ್ಲೆಯ ಜವಳಿ ಕಾರ್ಖಾನೆಯೊಂದರಲ್ಲಿ ರಾಸಾಯನಿಕ ತ್ಯಾಜ್ಯ ಟ್ಯಾಂಕ್ ಸ್ವಚ್ಛಗೊಳಿಸುವಾಗ, ಸೋರಿಕೆಯಾದ ಅನಿಲ ಸೇವಿಸಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಧೋಲ್ಕಾ ತಹಸಿಲ್‌ನ ಸಿಮೆಜ್-ಧೋಲಿ ಗ್ರಾಮದಲ್ಲಿನ ಚಿರ್ಪಾಲ್ ಗ್ರೂಪ್ ಆಫ್ ಕಂಪನಿಗಳ ಘಟಕದಲ್ಲಿ ಕಾರ್ಮಿಕರು ರಾಸಾಯನಿಕ ತ್ಯಾಜ್ಯ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಸ್ವಚ್ಛತಾ ಕಾರ್ಯ ನಡೆಯುತ್ತಿದ್ದಾಗ ರಾಸಾಯನಿಕ ತ್ಯಾಜ್ಯ ತೊಟ್ಟಿಯಲ್ಲಿ ಸೋರಿಕೆಯಾದ ಅನಿಲದಿಂದ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಎಫ್​ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಹಮದಾಬಾದ್ ಗ್ರಾಮೀಣ ಉಪ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಪಾಂಡೆ ತಿಳಿಸಿದ್ದಾರೆ.

Last Updated : Jul 19, 2020, 6:09 AM IST

ABOUT THE AUTHOR

...view details