ಕರ್ನಾಟಕ

karnataka

ETV Bharat / bharat

ಎಂದಿಗೂ ಔಟ್ ಆಫ್ ಫ್ಯಾಶನ್ ಆಗದ 4 ಭಾರತೀಯ ಉಡುಗೆಗಳು... - ಪ್ರತಿಯೊಬ್ಬ ಮಹಿಳೆಯ ಬಳಿ ಇರಲೇಬೇಕಾದ ಭಾರತೀಯ ಉಡುಪುಗಳು

ಭಾರತೀಯ ಉಡುಪುಗಳು ಯಾವತ್ತೂ ಔಟ್ ಆಫ್ ಫ್ಯಾಶನ್ ಆಗುವುದಿಲ್ಲ. ಪ್ರತಿಯೊಬ್ಬ ಮಹಿಳೆಯ ಬಳಿ ಇರಲೇಬೇಕಾದ 4 ಭಾರತೀಯ ಉಡುಪುಗಳ ಪಟ್ಟಿ ಇಲ್ಲಿದೆ. ಹಬ್ಬ ಹಾಗೂ ಉತ್ಸವಗಳ ಸಂದರ್ಭದಲ್ಲಿ ಇವುಗಳನ್ನು ಧರಿಸಲಾಗುತ್ತದೆ.

India festival-wears
ಭಾರತೀಯ ಉಡುಗೆಗಳು

By

Published : Nov 3, 2020, 11:15 PM IST

Updated : Nov 4, 2020, 6:21 AM IST

ಹೈದರಾಬಾದ್:ಪ್ರತಿವರ್ಷ ಹಬ್ಬದ ಪ್ರವೃತ್ತಿ ಬದಲಾಗುತ್ತಿದ್ದರೂ, ಕೆಲವು ಅತ್ಯುನ್ನತ ಭಾರತೀಯ ಉಡುಪುಗಳು ಯಾವತ್ತೂ ಔಟ್ ಆಫ್ ಫ್ಯಾಶನ್ ಆಗುವುದಿಲ್ಲ. ಹಬ್ಬ ಹಾಗೂ ಉತ್ಸವಗಳ ಸಂದರ್ಭದಲ್ಲಿ ಇವುಗಳನ್ನು ಧರಿಸಲಾಗುತ್ತದೆ.

ಆದ್ದರಿಂದ ಹಬ್ಬದ ಆಚರಣೆಗಳಿಗೆ ಪ್ರತಿಯೊಬ್ಬ ಮಹಿಳೆಯ ಬಳಿ ಇರಲೇಬೇಕಾದ 4 ಭಾರತೀಯ ಉಡುಪುಗಳ ಪಟ್ಟಿ ಇಲ್ಲಿದೆ.

ಸೀರೆ:

ಭಾರತೀಯ ಜನಾಂಗೀಯ ಉಡುಗೆಯನ್ನು ಪ್ರತಿನಿಧಿಸುವುದೇ ಸೀರೆ. ಇದು ಎಲ್ಲಾ ವಯೋಮಾನದ ಮಹಿಳೆಯರಿಗೆ ಹೊಂದುತ್ತದೆ. ಕಾಲ ಬದಲಾದಂತೆ ಇದರ ಶೈಲಿ ಬದಲಾಗಬಹುದು ಮತ್ತು ವಿಕಸನಗೊಳ್ಳಬಹುದು ಆದರೆ ಇದನ್ನು ಎಲ್ಲಾ ವಯಸ್ಸಿನ ಮಹಿಳೆಯರು ಪ್ರೀತಿಸುತ್ತಾರೆ.

ಸೀರೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಸುಂದರ ಹಾಗೂ ಆಕರ್ಷಕ ಮತ್ತು ಲುಕ್ ನೀಡುತ್ತದೆ. ಸೀರೆಯಲ್ಲಿ ವಿವಿಧ ಬಗೆ ಹಾಗೂ ವಿನ್ಯಾಸಗಳಿದ್ದು, ಸಂದರ್ಭಕ್ಕೆ ತಕ್ಕಂತೆ ಮಹಿಳೆಯರು ಸೀರೆ ಧರಿಸುತ್ತಾರೆ.

ಸೀರೆ

ಸಲ್ವಾರ್ ಕಮೀಜ್:

ಸಲ್ವಾರ್ ಕಮೀಜ್ ಭಾರತದ ಅತ್ಯಂತ ಹಳೆಯ ಉಡುಪುಗಳಲ್ಲಿ ಒಂದಾಗಿದೆ ಮತ್ತು ಇದನ್ನು ಎಲ್ಲಾ ಪ್ರದೇಶದ ಮಹಿಳೆಯರು, ಎಲ್ಲಾ ವೃತ್ತಿಗಳಲ್ಲಿರುವವರು ಮತ್ತು ವಯಸ್ಸಿನವರು ಧರಿಸುತ್ತಾರೆ.

ಸಲ್ವಾರ್ ಕಮೀಜ್

ಇದು ಸರಳವಾದ ಕುರ್ತಾ, ಚೂಡಿದಾರ್ ಮತ್ತು ದುಪ್ಪಟ್ಟಾವನ್ನು ಹೊಂದಿದೆ ಬಹು ನೆರಿಗೆ ಹೊಂದಿರುವ ಪಟಿಯಾಲ ಚೂಡಿದಾರ್, ಸಣ್ಣ ಕುರ್ತಿ ಮತ್ತು ಸುಂದರವಾದ ದುಪಟ್ಟಾ ಹೊಂದಿರುವ ಸಲ್ವಾರ್​ ಕಮೀಜ್​ಗಳಿವೆ. ಜೊತೆಗೆ ಕಡಿಮೆ ನೆರಿಗೆಯ ಚೂಡಿದಾರ್, ಪಾದದವರೆಗಿನ ಕಮೀಜ್‌ ಹಾಗೂ ಸರಳ ದುಪಟ್ಟಾ ಹೊಂದಿರುವ ಸಲ್ವಾರ್ ಕಮೀಜ್​ಗಳು ಕೂಡಾ ಇವೆ. ಇದು ಯುವ ಪೀಳಿಗೆಯನ್ನು ಹೆಚ್ಚು ಸೆಳೆಯುತ್ತಿದೆ.

ಅನಾರ್ಕಲಿ:

ಅನಾರ್ಕಲಿ ಅನೇಕ ವಿಧಗಳಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತವಾಗಿದೆ. ಪ್ರಾಚೀನ ಯುಗದಲ್ಲಿ ಇದನ್ನು ಉತ್ತರ ಭಾರತೀಯ ಮಹಿಳೆಯರು ಧರಿಸಿದ್ದರು ಮತ್ತು ಇದು ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಅನಾರ್ಕಲಿ ಸಲ್ವಾರ್ ಕಮೀಜ್​ಗಳನ್ನು ಭಾರತದ ಕೆಲ ಪ್ರದೇಶಗಳಲ್ಲಿ ವಿವಾಹದಲ್ಲಿ ಧರಿಸಲಾಗುತ್ತದೆ.

ಅನಾರ್ಕಲಿ

ಇದು ಸಾಮಾನ್ಯವಾಗಿ ಭಾರವಾದ ಕಸೂತಿಯೊಂದಿಗೆ ಸೊಗಸಾಗಿರುತ್ತದೆ. ಕೆಲವು ರತ್ನದ ಕಲ್ಲುಗಳಿಂದ ಕೂಡಿದೆ. ಯುವ ಪೀಳಿಗೆ ಇದನ್ನು ಸಮಕಾಲೀನ ಶೈಲಿಯ ಉಡುಪು ಎಂದು ಒಪ್ಪಿಕೊಂಡಿದೆ ಮತ್ತು ಇದನ್ನು ಎಲ್ಲಾ ವಯಸ್ಸಿನ ಮಹಿಳೆಯರು ಧರಿಸುತ್ತಾರೆ.

ಲೆಹೆಂಗಾ:

ಒಂದು ಕಾಲದಲ್ಲಿ ಲೆಹೆಂಗಾವನ್ನು ವಧುವಿನ ಉಡುಗೆ ಎಂದು ಪರಿಗಣಿಸಲಾಗಿತ್ತು. ಆದರೆ ಸಮಯ ಮತ್ತು ವಿನ್ಯಾಸಗಳಲ್ಲಿ ವಿಕಸನದೊಂದಿಗೆ ಇದು ಸಮಕಾಲೀನ ಉಡುಪಾಗಿ ಮಾರ್ಪಟ್ಟಿದೆ. ಪಾರ್ಟಿ ಅಥವಾ ಸಣ್ಣ ಸಮಾರಂಭಗಳಿಗೆ ಯುವತಿಯರು ಸರಳವಾದ ಲೆಹೆಂಗಾಗಳನ್ನು ಧರಿಸಲು ಇಷ್ಟಪಡುತ್ತಾರೆ.

ಲೆಹೆಂಗಾ

ಅದ್ಧೂರಿ ಕಾರ್ಯಕ್ರಮಗಳಿಗೆ ಹಾಗೂ ಉತ್ಸವಗಳಿಗೆ ಹೆಚ್ಚು ಕಸೂತಿಯಿಂದ ಕೂಡಿದ ಲೆಹೆಂಗಾ ಧರಿಸಲಾಗುತ್ತದೆ. ಮದುವೆಯಲ್ಲಿ ವಧು ವಿಶೇಷ ರೀತಿಯ ವಿನ್ಯಾಸ ಹೊಂದಿರುವ ಲೆಹೆಂಗಾ ಆರಿಸುಕೊಳ್ಳುತ್ತಾಳೆ. ಲೆಹೆಂಗಾ ಭಾರತೀಯ ಮಹಿಳೆಯ ಹೃದಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

Last Updated : Nov 4, 2020, 6:21 AM IST

ABOUT THE AUTHOR

...view details