ರಾಜ್ಕೋಟ್:ಗುಜರಾತ್ನ ರಾಜ್ಕೋಟ್ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ 3.50ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.
ಗುಜರಾತ್: ರಾಜ್ಕೋಟ್ನಲ್ಲಿ 4.1 ತೀವ್ರತೆಯ ಭೂಕಂಪ - ಉಪ್ಲೆಟಾ
ಗುಜರಾತ್ನ ರಾಜ್ಕೋಟ್ ಜಿಲ್ಲೆಯಲ್ಲಿ 4.1 ತೀವ್ರತೆಯ ಭೂಕಂಪ ಉಂಟಾಗಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.
ರಾಜ್ಕೋಟ್ನಲ್ಲಿ 4.1 ತೀವ್ರತೆಯ ಭೂಕಂಪ
ರಾಜ್ಕೋಟ್ನ ಉಪ್ಲೆಟಾ, ಜೆಟ್ಪುರ, ಧೋರಜಿ, ಗೊಂಡಾಲ್ ನಗರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಾದ ಚಾರ್ಖಾಡಿ, ಪಾಟೀಡಾಲ್, ಜೆತಲ್ಸರ್, ಮೋತಿವಾಡಿ, ಭುಖಿ, ಮುರ್ಖಾಡ, ಇಸ್ರಾದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಕಂಪದ ಕೇಂದ್ರ ಬಿಂದು ಉಪ್ಲೆಟಾದಿಂದ 25 ಕಿಲೋ ಮೀಟರ್ ದೂರದಲ್ಲಿದೆ. ಘಟನೆಯಿಂದ ಜನರು ಆತಂಕಗೊಂಡಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.