ಮಣಿಪುರ/ಉಕ್ರುಲ್:ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪನವು ಇಂದು ಮಣಿಪುರದ ಉಕ್ರುಲ್ ಪ್ರದೇಶದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ.
ಮಣಿಪುರದಲ್ಲಿ ಮತ್ತೆ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲು - ಮಣಿಪುರದ ಉಖ್ರೂಲ್ನಲ್ಲಿ ಭೂಕಂಪನ
ಮಣಿಪುರದ ಉಖ್ರುಲ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ದಾಖಲಾಗಿದೆ.. ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
![ಮಣಿಪುರದಲ್ಲಿ ಮತ್ತೆ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲು 4.0 magnitude quake strikes Manipur's Ukhrul](https://etvbharatimages.akamaized.net/etvbharat/prod-images/768-512-9613490-671-9613490-1605939123839.jpg)
ಮಣಿಪುರದಲ್ಲಿ ಮತ್ತೆ ಭೂಕಂಪನ
30 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಇಂದು 10:19 ರ ಸುಮಾರಿಗೆ ಭೂಕಂಪನ ಅನುಭವಿಸಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಇಂದು ಮುಂಜಾನೆ 6:54ರ ಸುಮಾರಿಗೆ ಕೂಡ 10 ಕಿ.ಮೀ ಆಳದಲ್ಲಿ ಭೂಕಂಪನದ ಅನುಭವವಾಗಿದೆ. ಇದರ ತೀವ್ರತೆ 2.8 ಇತ್ತು ಎಂದು ಎನ್‌ಸಿಎಸ್ ವರದಿ ಮಾಡಿತ್ತು. ಇತ್ತ ಆಂಧ್ರಪ್ರದೇಶದ ವಿಶಾಖದಲ್ಲೂ ಭೂಮಿ ನಡುಗಿದೆ ಎಂದು ವರದಿ ಆಗಿದೆ.