ಶ್ರೀನಗರ(ಜಮ್ಮು ಕಾಶ್ಮೀರ): ಕಣಿವೆ ನಾಡಿನಲ್ಲಿ ಭೂಕಂಪನ ಸಂಭವಿಸಿದೆ. ಕತ್ರಾದಿಂದ 84 ಕಿಲೋಮೀಟರ್ ದೂರದಲ್ಲಿ ಬೆಳಗ್ಗೆ 8.56ಕ್ಕೆ ಭೂಮಿ ನಡುಗಿದ ಅನುಭವವಾಗಿದೆ.
ಜಮ್ಮು ಕಾಶ್ಮೀರದಲ್ಲಿ ಲಘು ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲು - ಕಾಶ್ಮೀರ ಸುದ್ದಿ
ಜಮ್ಮು ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಸ್ಕೇಲ್ನಲ್ಲಿ 4.0ರಷ್ಟು ತೀವ್ರತೆ ದಾಖಲಾಗಿದೆ.
ಭೂಕಂಪನ
ರಿಕ್ಟರ್ ಸ್ಕೇಲ್ನಲ್ಲಿ 4.0 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದ್ದು, ಹಾನಿ ಬಗ್ಗೆ ಇನ್ನೂ ವರದಿಯಾಗಿಲ್ಲ.
ಅಕ್ಟೋಬರ್ 8, 2005ರಂದು ಗಡಿ ನಿಯಂತ್ರಣ ರೇಖೆಯ ಎರಡೂ ಭಾಗಗಳಲ್ಲಿ ದೊಡ್ಡ ದುರಂತ ಸಂಭವಿಸಿತ್ತು. ರಿಕ್ಟರ್ ಸ್ಕೇಲ್ನಲ್ಲಿ 7.6ರಷ್ಟು ತೀವ್ರತೆ ದಾಖಲಾಗಿದ್ದು, ಸುಮಾರು 80 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.