ನರಸಿಂಗಪುರ (ಮಧ್ಯಪ್ರದೇಶ) : ರಕ್ಷಾ ಬಂಧನದ ದಿನವೇ ಭೀಕರ ಅಪಘಾತ ಸಂಭವಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯ ಸಾಲಿಚೌಕ ಮತ್ತು ಗಾಡಾರ್ವಾರ ಬಳಿ ನಡೆದಿದೆ.
ರಕ್ಷಾ ಬಂಧನದ ದಿನವೇ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ - ರಕ್ಷಾಬಂಧನ
ರಕ್ಷಾ ಬಂಧನದ ದಿನವೇ ಭಾರೀ ಅಪಘಾತ ನಡೆದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯಲ್ಲಿ ನಡೆದಿದೆ.
![ರಕ್ಷಾ ಬಂಧನದ ದಿನವೇ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ accident](https://etvbharatimages.akamaized.net/etvbharat/prod-images/768-512-8275692-thumbnail-3x2-raa.jpg)
ಅಪಘಾತ
ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಎಣ್ಣೆಯ ಕ್ಯಾನ್ಗಳು ತುಂಬಿದ ಟ್ರಕ್ ಉರುಳಿಬಿದ್ದಿದ್ದೇ ಈ ಅವಘಡಕ್ಕೆ ಕಾರಣ. ಟ್ರಕ್ನಲ್ಲಿದ್ದ ದಂಪತಿ ಮತ್ತು ಇವರ ಇಬ್ಬರು ಗಂಡು ಮಕ್ಕಳು ಸಾವನ್ನಪ್ಪಿದ್ದಾರೆ.
ಅಪಘಾತದ ಸ್ಥಳಕ್ಕೆ ಗಾಡಾರ್ವಾರ ಮತ್ತು ಸಾಲಿಚೌಕಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಉರುಳಿದ್ದ ಟ್ರಕ್ ಅನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.