ಕರ್ನಾಟಕ

karnataka

ETV Bharat / bharat

ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 34 ಮಂದಿಗೆ ಗಾಯ - ಮಹಾರಾಷ್ಟ್ರದಲ್ಲಿ ಬಸ್ ಅಪಘಾತ

ಅಂದಾಜು 30 ರಿಂದ 40 ಅಡಿ ಆಳದ ಕಂದಕಕ್ಕೆ ಬಸ್ ಉರುಳಿಬಿದ್ದ ಪರಿಣಾಮ ಐವರು ಪ್ರಯಾಣಿಕರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.

bus accident in Gujarat's Surat
ಕಂದಕಕ್ಕೆ ಉರುಳಿದ ಬಸ್

By

Published : Oct 21, 2020, 9:54 AM IST

Updated : Oct 21, 2020, 10:25 AM IST

ನಂದುರ್ಬರ್(ಮಹಾರಾಷ್ಟ್ರ): ಸೂರತ್‌ಗೆ ಪ್ರಯಾಣಿಸುತ್ತಿದ್ದ ಬಸ್ ಕೊಂಡೈಬರಿ ಘಾಟ್​ನಲ್ಲಿ ಅಪಘಾತಕ್ಕೀಡಾಗಿದ್ದು ಐವರು ಅಸುನೀಗಿದ್ದಾರೆ.

ಸುಮಾರು 30 ರಿಂದ 40 ಅಡಿ ಆಳದ ಕಣಿವೆಗೆ ಬಸ್ ಉರುಳಿಬಿದ್ದ ಪರಿಣಾಮ ಐವರು ಸಾವಿಗೀಡಾಗಿದ್ದು, 34 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಂದಕಕ್ಕೆ ಉರುಳಿದ ಬಸ್

"ಮಲ್ಕಾಪುರದಿಂದ ಗುಜರಾತ್‌ನ ಸೂರತ್‌ಗೆ ಹೋಗುತ್ತಿದ್ದ ಖಾಸಗಿ ಬಸ್ ಮುಂಜಾನೆ 3.15 ರ ಸುಮಾರಿಗೆ ಕೊಂಡೈಬರಿ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಆಳದ ಕಂದಕಕ್ಕೆ ಬಿದ್ದಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ

"ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಈ ದುರ್ಘಟನೆಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದು, 34 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಸರ್‌ವಾಡಿಯ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

Last Updated : Oct 21, 2020, 10:25 AM IST

ABOUT THE AUTHOR

...view details