ನಾಗ್ಪುರ(ಮಹಾರಾಷ್ಟ್ರ): ಜಿಲ್ಲೆಯ ಸಿಂಗೋರಿ ಗ್ರಾಮದ ಬಳಿ ಖಾಸಗಿ ಬಸ್ ಮತ್ತು ಕಂಟೇನರ್ ನಡುವೆ ಸಂಭವಿಸಿದ ಭೀಕರ ಅಪಘಾತಕ್ಕೆ ನಾಲ್ಕರು ಬಲಿಯಾಗಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಂತಿದ್ದ ಕಂಟೇನರ್ಗೆ ಬಸ್ ಡಿಕ್ಕಿ: ನಾಲ್ವರು ಸಾವು, 12 ಮಂದಿಗೆ ಗಾಯ - ನಾಗ್ಪುರ ಬಳಿ ರಸ್ತೆ ಅಪಘಾತ
ರಸ್ತೆಯಲ್ಲಿ ನಿಲ್ಲಿಸಿದ್ದ ಕಂಟೇನರ್ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ರೆ, ಹನ್ನೆರಡು ಮಂದಿ ಗಾಯಗೊಂಡಿದ್ದಾರೆ
![ನಿಂತಿದ್ದ ಕಂಟೇನರ್ಗೆ ಬಸ್ ಡಿಕ್ಕಿ: ನಾಲ್ವರು ಸಾವು, 12 ಮಂದಿಗೆ ಗಾಯ bus rams into stationary container truck,ತಿದ್ದ ಕಂಟೇನರ್ಗೆ ಬಸ್ ಡಿಕ್ಕಿ](https://etvbharatimages.akamaized.net/etvbharat/prod-images/768-512-6083941-849-6083941-1581767729571.jpg)
ಗೊಂಡಿಯಾ ಜಿಲ್ಲೆಯ ತಿರೋರಾದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನರು ಖಾಸಗಿ ಬಸ್ನಲ್ಲಿ ನಾಗ್ಪುರಕ್ಕೆ ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 'ಮುಂಜಾನೆ 5.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಂಟೇನರ್ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ರೆ, ಹನ್ನೆರಡು ಮಂದಿ ಗಾಯಗೊಂಡಿದ್ದಾರೆ' ಎಂದು ಮೌಡಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಧುಕರ್ ಗೈಟ್ ಹೇಳಿದ್ದಾರೆ.
ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲವರು ನಾಗ್ಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಇನ್ನು ಕೆಲವರು, ಭಂಡಾರ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಇನ್ಸ್‌ಪೆಕ್ಟರ್ ಮಧುಕರ್ ಗೈಟ್ ತಿಳಿಸಿದ್ದಾರೆ.