ರಾಜ್ಕೋಟ್(ಗುಜರಾತ್):ನಾಲ್ಕು ದಿನಗಳ ಹಿಂದೆ ಹುಟ್ಟಿದ ನವಜಾತ ಶಿಶುವನ್ನ ಬೀದಿ ನಾಯಿ ಎಳೆದೊಯ್ದಿರುವ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳಗಡೆ ಹೋಗಿರುವ ನಾಯಿ ಮಲಗಿದ್ದ ಮಗುವನ್ನ ಎಳೆದುಕೊಂಡು ಹೋಗಿದೆ.
ನಾಲ್ಕು ದಿನದ ನವಜಾತ ಶಿಶು ಎಳೆದೊಯ್ದ ನಾಯಿ... ಸ್ಥಳೀಯರಿಂದ ರಕ್ಷಣೆ, ಸ್ಥಿತಿ ಗಂಭೀರ! - ನವಜಾತ ಹೆಣ್ಣು ಮಗು ಎಳೆದೊಯ್ದ ನಾಯಿ
ನಾಲ್ಕು ದಿನಗಳ ಹಿಂದೆ ಜನಸಿದ್ದ ನವಜಾತ ಹೆಣ್ಣು ಮಗುವನ್ನ ಬೀದಿ ನಾಯಿ ಕಚ್ಚಿ ಎಳೆದೊಯ್ದ ಘಟನೆ ಗುಜರಾತ್ನಲ್ಲಿ ನಡೆದಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ವಿವಿಧ ಭಾಗಗಳಲ್ಲಿ ನಾಯಿ ಕಚ್ಚಿರುವ ಕಾರಣ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮಗುವನ್ನ ಎಳೆದೊಯ್ದಿರುವ ನಾಯಿ ಬಾಯಿಯಿಂದ ಕಚ್ಚಿರುವ ಪರಿಣಾಮ ಶೇ.20ರಷ್ಟು ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿನ್ನೆ ರಾತ್ರಿ ಮನೆ ಹೊರಗೆ ಕೆಲ ಮಕ್ಕಳು ಕ್ರಿಕೆಟ್ ಆಡುತ್ತಿದ್ದ ವೇಳೆ, ನಾಯಿ ನವಜಾತ ಶಿಶು ಎಳೆದೊಯುತ್ತಿರುವ ದೃಶ್ಯ ನೋಡಿ ಮಾಹಿತಿ ನೀಡಿದ್ದಾರೆ. ಈ ವೇಳೆ, ತಕ್ಷಣವೇ ಕೆಲವರು ಮಗುವಿನ ರಕ್ಷಣೆ ಮಾಡಿದ್ದು, ಆಂಬ್ಯುಲೆನ್ಸ್ಗೆ ಫೋನ್ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿರುವ ವೈದ್ಯರು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಆರಂಭಿಸಿದ್ದಾರೆ.