ಮುಂಬೈ: ಸುಶಾಂತ್ ಸಿಂಗ್ ರಜಪೂತ್ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ತನಿಖೆ ನಡೆಸುತ್ತಿದ್ದು, ಕರಮ್ ಜೀತ್ ಸಿಂಗ್ ಆನಂದ್ ಎಂಬಾತನನ್ನು ಬಂಧಿಸಿದೆ. ಆತನ ಬಳಿ ಇದ್ದ 500 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಮುಂಬೈ: ಎನ್ಸಿಬಿಯಿಂದ ನಾಲ್ವರ ಬಂಧನ, ಮಾದಕ ವಸ್ತು ವಶ - ಡ್ರಗ್ ಜಾಲ
ಸುಶಾಂತ್ ಸಿಂಗ್ ರಜಪೂತ್ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತನಿಖೆ ನಡೆಸುತ್ತಿದ್ದು, ನಾಲ್ವರನ್ನು ಬಂಧಿಸಲಾಗಿದೆ.
ಕರಮ್ ಜೀತ್ ಸಿಂಗ್ ಆನಂದ್
ಎನ್‌ಸಿಬಿಯ ಹೆಚ್ಚಿನ ತನಿಖೆಯಲ್ಲಿ ಪೊವಾಯಿ ನಿವಾಸಿ ಅಂಕುಶ್ ಅರ್ನೆಜಾ (29) ಎಂಬಾತನನ್ನು ಬಂಧಿಸಿ, ಆತನ ಬಳಿಯಿದ್ದ 42 ಗ್ರಾಂ ಚರಸ್ ಮತ್ತು 1,12,400 ರೂ.ಗಳನ್ನು ವಶಪಡಿಸಿಕೊಂಡಿದೆ. ಎನ್‌ಸಿಬಿಯ ಗೋವಾ ಘಟಕದ ಕಾರ್ಯಾಚರಣೆಯಲ್ಲಿ ಕ್ರಿಸ್ ಕೋಸ್ಟಾ ಎಂಬಾತನನ್ನು ಬಂಧಿಸಲಾಗಿದೆ.
ಈ ಹಿಂದೆ ಬಂಧಿಸಲ್ಪಟ್ಟಿದ್ದ ಅನುಜ್ ಕೇಶವಾನಿ ನೀಡಿದ ಕೆಲ ಮಾಹಿತಿಯ ಆಧಾರದ ಮೇಲೆ ಎನ್‌ಸಿಬಿ ಜಂಟಿ ನಿರ್ದೇಶಕ ಸಮೀರ್ ವಾಂಖಡೆ ಅವರ ತಂಡ ಕ್ರಮ ಕೈಗೊಂಡಿದೆ. ಸದ್ಯ ಈ ಆರೋಪ ಪ್ರಕರಣದಲ್ಲಿ ಕೆಲವು ಬಾಲಿವುಡ್ ಸೆಲೆಬ್ರಿಟಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.