ಕರ್ನಾಟಕ

karnataka

ETV Bharat / bharat

ಮೊಟ್ಟಮೊದಲ ಕೊರೊನಾ ಔಷಧ ಸ್ಪುಟ್ನಿಕ್​ಗೆ ಶೀಘ್ರದಲ್ಲೇ 3ನೇ ಹಂತದ ಪ್ರಯೋಗ - ಲೆಕ್ಸಾಂಡರ್ ಗಿಂಟ್ಸ್​ಬರ್ಗ್

ಜಗತ್ತಿನ ಮೊಟ್ಟ ಮೊದಲ ಕೊರೊನಾ ಔಷಧವಾದ ಸ್ಪುಟ್ನಿಕ್-5 ಔಷಧಕ್ಕೆ 7ರಿಂದ 10 ದಿನಗಳಲ್ಲಿ ಮೂರನೇ ಹಂತದ ಪ್ರಯೋಗ ನಡೆಯಲಿದೆ ಎಂದು ವರದಿಯಾಗಿದೆ.

sputnik vaccine
ಸ್ಪುಟ್ನಿಕ್ ಔಷಧ

By

Published : Aug 16, 2020, 5:10 PM IST

ಮಾಸ್ಕೋ (ರಷ್ಯಾ):ವಿಶ್ವದ ಪ್ರಥಮ ಕೊರೊನಾ ವೈರಸ್ ಔಷಧವಾದ ಸ್ಪುಟ್ನಿಕ್-5 ಔಷಧದ ಮೂರನೇ ಹಂತದ ಪ್ರಯೋಗಗಳು ಇನ್ನು 7ರಿಂದ 10 ದಿನಗಳಲ್ಲಿ ಆರಂಭವಾಗುತ್ತವೆ ಎಂದು ವರದಿಯೊಂದು ಹೇಳಿದೆ.

ರಷ್ಯಾ ಆರೋಗ್ಯ ಇಲಾಖೆಯ ಗಮಾಲಿಯಾ ಸೈಟಿಂಫಿಕ್ ರಿಸರ್ಚ್ ಇನ್ಸ್​ಟಿಟ್ಯೂಟ್ ಮತ್ತು ಮೈಕ್ರೋ ಬಯಾಲಜಿ ಈ ಔಷಧವನ್ನು ಸಿದ್ಧಪಡಿಸಿದ್ದು, ಟಾಸ್​ ನ್ಯೂಸ್ ಏಜೆನ್ಸಿಯ ವರದಿಯಂತೆ ಸಾವಿರಾರು ಮಂದಿ ಈ ಪ್ರಯೋಗದ ಭಾಗವಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಆರೋಗ್ಯ ಇಲಾಖೆ ಈ ಪ್ರಕ್ರಿಯೆಯನ್ನು ತಡಮಾಡುವುದಿಲ್ಲ ಎಂದು ತಿಳಿದಿದೆ. ಒಂದು ವಾರದಲ್ಲಿ ನಾವು ಒಪ್ಪಿಗೆ ಪಡೆದು 7ರಿಂದ 10 ದಿನಗಳಲ್ಲಿ ಮೂರನೇ ಹಂತದ ಪ್ರಯೋಗಕ್ಕೆ ಸ್ಪುಟ್ನಿಕ್ ಔಷಧವನ್ನು ಒಳಪಡಿಸುತ್ತೇವೆ ಎಂದು ಗಮಾಲಿಯಾ ನ್ಯಾಷನಲ್ ರಿಸರ್ಚ್ ಸೆಂಟರ್​ನ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್​ಬರ್ಗ್​ ಟಾಸ್​ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದು ಮಾಸ್ಕೋದಲ್ಲಿ ಪ್ರಯೋಗ ನಡೆಯಲಿದ್ದು, ಸಾವಿರಾರು ಮಂದಿ ಇದರ ಭಾಗವಾಗಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೊರೊನಾಗೆ ಮೊದಲ ಔಷಧ ಕಂಡುಹಿಡಿದಿರುವುದಾಗಿ ರಷ್ಯಾ ಹೇಳಿಕೊಂಡಿದ್ದು, ಮಂಗಳವಾರ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜಗತ್ತಿನ ಮೊದಲ ಕೊರೊನಾ ಔಷಧಿ ಎಂದು ಘೋಷಿಸಿದ್ದರು. ಅಷ್ಟೇ ಅಲ್ಲದೇ ತಮ್ಮ ಮಗಳಾದ ಮಾರಿಯಾ ಪುಟಿನ್​ ಮೇಲೆ ಈ ಔಷಧದ ಪ್ರಯೋಗ ಕೂಡಾ ನಡೆದು ಯಶಸ್ವಿಯಾಗಿತ್ತು.

ಈಗ ಸದ್ಯಕ್ಕೆ ರಷ್ಯಾದಲ್ಲಿ 9,17,884ಕ್ಕೂ ಹೆಚ್ಚು ಕೊರೊನಾ ಸೋಂಕಿತರಿದ್ದು, ಇದರಲ್ಲಿ 15,617 ಮಂದಿ ಸಾವನ್ನಪ್ಪಿದ್ದು, ಏಳು ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ABOUT THE AUTHOR

...view details