ಭೋಪಾಲ್ (ಮಧ್ಯಪ್ರದೇಶ): ಸಮಯ ಕಳೆದಂತೆ ಗಾಯಗಳೂ ಮಾಯುತ್ತವೆ, ನೋವು ಕ್ಷೀಣಿಸುತ್ತದೆ ಎಂದು ಹೇಳಲಾಗುತ್ತೆ. ಆದರೆ, ಕೆಲವು ಘಟನೆಗಳು ಮಾಡೋ ಗಾಯದ ಆಳ ಜೀವನ ಪರ್ಯಂತ ಮರೆಯಲಸಾಧ್ಯ. ಇಂತದ್ದೇ ಒಂದು ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಡಿಸೆಂಬರ್ 2 ಮತ್ತು 3 ಕ್ಕೆ ಘಟಿಸಿತ್ತು. ಆ ಘಟನೆಗೆ ಇಂದಿಗೆ 35 ವರ್ಷ.
'ಭೋಪಾಲ್ ಅನಿಲ ದುರಂತ' ಕ್ಕೆ 35 ವರ್ಷ.. ಸಿಕ್ಕಿತಾ ನೊಂದವರಿಗೆ ನ್ಯಾಯ...? - Bhopal gas tragedy
1984, ಡಿಸೆಂಬರ್ 2 ಮತ್ತು 3 ರ ಮಧ್ಯರಾತ್ರಿಯಲ್ಲಿ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಬಿಡುಗಡೆಯಾದ ಕನಿಷ್ಠ 30 ಟನ್ ಐಸೊಸೈನೇಟ್ ವಿಷಕಾರಿ ಅನಿಲ ಮೀಥೈಲ್, 15,000 ಕ್ಕೂ ಹೆಚ್ಚು ಜನರನ್ನು ಕೊಂದು ಹಾಕಿತ್ತು. ಆ ದುರ್ಘಟನೆಯನ್ನು ಇತಿಹಾಸದ ಪುಟಗಳಲ್ಲಿ 'ಭೋಪಾಲ್ ಅನಿಲ ದುರಂತ' ಎಂದೇ ಕರೆಯಲಾಗುತ್ತದೆ.
1984, ಡಿಸೆಂಬರ್ 2 ಮತ್ತು 3 ರ ಮಧ್ಯರಾತ್ರಿಯಲ್ಲಿ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಬಿಡುಗಡೆಯಾದ ಕನಿಷ್ಠ 30 ಟನ್ ಐಸೊಸೈನೇಟ್ ವಿಷಕಾರಿ ಅನಿಲ ಮೀಥೈಲ್, 15,000 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. ಆ ದುರ್ಘಟನೆಯನ್ನು ಇತಿಹಾಸದ ಪುಟಗಳಲ್ಲಿ 'ಭೋಪಾಲ್ ಅನಿಲ ದುರಂತ' ಎಂದೇ ಕರೆಯಲಾಗುತ್ತದೆ. ಈ ಅನಿಲ ಹಗರಣದಲ್ಲಿ ಸಾವಿರಾರು ಜನರು ಸಾವನ್ನಪ್ಪಿದರು, ಲಕ್ಷಾಂತರ ಕುಟುಂಬಗಳ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಆ ಭಯಾನಕ ರಾತ್ರಿಯನ್ನು ನೆನಪಿಸಿಕೊಳ್ಳುತ್ತಾ, ಇಂದಿಗೂ ಅನಿಲ ದುರಂತಕ್ಕೀಡಾದವರು ಇವತ್ತಿಗೂ ನಡುಗುತ್ತಾರೆ.
ದುರಂತದಲ್ಲಿ ಸಿಲುಕಿ ನಲುಗಿದ ಸಂತ್ರಸ್ತರಿಗೆ ಸರಿಯಾದ ನ್ಯಾಯ ದೊರೆತಿಲ್ಲ. ಇಂದಿಗೂ ಅನಿಲ ದುರಂತಕ್ಕೊಳಗಾದವರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಈ 35 ವರ್ಷಗಳಲ್ಲಿ, ಅನಿಲ ಪ್ರಕರಣದ ಸಂತ್ರಸ್ತರು ಎಷ್ಟೇ ಪ್ರದರ್ಶನ, ಜಾಥಾಗಳನ್ನ, ಮತದಾನ ಬಹಿಷ್ಕಾರಗಳಂತಹ ಹಲವಾರು ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ವರೆಗೂ ಸರ್ಕಾರಗಳು ಭರವಸೆಗಳನ್ನೇ ನೀಡುತ್ತಾ ಬಂದಿದ್ದು, ಪರಿಹಾರ ಮಾತ್ರ ಒಂಟೆಯ ಬಾಯಿಯಲ್ಲಿ ಜೀರಿಗೆ ಹಾಕಿದಂತಾಗಿದೆ.