ಕರ್ನಾಟಕ

karnataka

ETV Bharat / bharat

ಬಂದೂಕು ಕೆಳಗಿಳಿಸಿ ಪೊಲೀಸರಿಗೆ ಶರಣಾದ 33 ಮಾವೋವಾದಿಗಳು - ತೆಲಂಗಾಣದಲ್ಲಿ ಮಾವೋವಾದಿಗಳು ಶರಣು

ಚೆರ್ಲಾ ಮಂಡಲದ ಬಟ್ಟಿನಪಳ್ಳಿ ಮತ್ತು ಕಿಷ್ಟರಂಪಾಡು ಗ್ರಾಮಗಳ 33 ಸದಸ್ಯರು ಮತ್ತು ಸಿಪಿಐ (ಮಾವೋವಾದಿ) ಗ್ರಾಮ ಸಮಿತಿ ಸದಸ್ಯರು ಪೊಲೀಸ್ ಮತ್ತು ಸಿಆರ್‌ಪಿಎಫ್ ಉಪಸ್ಥಿತಿಯಲ್ಲಿ ಶರಣಾಗಿ ಮುಖ್ಯವಾಹಿನಿಗೆ ಮರಳಿದ್ದಾರೆ.

Maoist
ಮಾವೋವಾದಿಗಳು

By

Published : Nov 24, 2020, 10:23 AM IST

Updated : Nov 24, 2020, 1:21 PM IST

ಕೊಥಗುಡೆಮ್: ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ 33 ಸದಸ್ಯರು ಭದ್ರಾಡ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಪೊಲೀಸರ ಮುಂದೆ ಶರಣಾಗಿ ಮುಖ್ಯವಾಹಿನಿಗೆ ಬರಲು ಇಚ್ಛಿಸಿದ್ದಾರೆ.

ಚೆರ್ಲಾ ಮಂಡಲದ ಬಟ್ಟಿನಪಳ್ಳಿ ಮತ್ತು ಕಿಷ್ಟರಂಪಾಡು ಗ್ರಾಮಗಳ 33 ಸದಸ್ಯರು ಮತ್ತು ಸಿಪಿಐ (ಮಾವೋವಾದಿ) ಗ್ರಾಮ ಸಮಿತಿ ಸದಸ್ಯರು ಪೊಲೀಸ್ ಮತ್ತು ಸಿಆರ್‌ಪಿಎಫ್ ಉಪಸ್ಥಿತಿಯಲ್ಲಿ ಶರಣಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ.

ನೆರೆಯ ಛತ್ತೀಸ್‌ಗಢದ ಎಂಟು ಮಂದಿ ಸೇರಿ ಹಲವರು, ಕಳೆದ ಎರಡು ವರ್ಷಗಳಿಂದ ಮಾವೋವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದರು. ಅವರಲ್ಲಿ ಕೆಲವರು ರಸ್ತೆ ಸ್ಫೋಟ, ಭೂಕುಸಿತ ಕೃತ್ಯ ಎಸಗುವುದು ಮತ್ತು ರಸ್ತೆ ನಿರ್ಮಾಣ ಕಾರ್ಯಗಳಲ್ಲಿ ಬಳಸಲಾಗುವ ನಿರ್ಮಾಣ ಸಲಕರಣೆಗಳ ವಾಹನಗಳನ್ನು ಸುಡುವುದರಲ್ಲಿ ಭಾಗಿಯಾಗಿದ್ದರು.

ಒಡಿಶಾ ವಿಧಾನಸಭೆ ಕಟ್ಟಡ ಮುಂಭಾಗ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

ಪೊಲೀಸರ ನಿರಂತರ ಪ್ರಯತ್ನದ ಫಲವಾಗಿ ಉತ್ತಮ ಜೀವನ ಮತ್ತು ಮುಖ್ಯವಾಹಿನಿಗೆ ಬರಬೇಕೆಂಬ ಅವರ ಆಸೆಯಿಂದ ಶರಣಾಗಲು ನಿರ್ಧರಿಸಿದ್ದಾರೆ ಎಂದು ಭದ್ರಾಡ್ರಿ ಕೊಥಗುಡೆಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ದತ್ ಹೇಳಿದ್ದಾರೆ.

ಎಲ್ಲ ಮಾವೋವಾದಿ ಸದಸ್ಯರು ಮತ್ತು ಅವರ ಮುಖಂಡರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಬೇಕೆಂದು ಮನವಿ ಮಾಡಿದರು.

Last Updated : Nov 24, 2020, 1:21 PM IST

ABOUT THE AUTHOR

...view details