ನವದೆಹಲಿ: ಕೊರೊನಾ ಅವಾಂತರಕ್ಕೆ ಭಾರತ ತತ್ತರಿಸಿದ್ದು, ಕಳೆದ ನಾಲ್ಕು ದಿನಗಳಿಂದ 11 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ದೇಶದಲ್ಲಿ ಕೊರೊನಾಗೆ 9,520 ಜನರು ಬಲಿ... ಸೋಂಕಿತರ ಸಂಖ್ಯೆ 3,32,424ಕ್ಕೆ ಏರಿಕೆ - covid 19
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 11,502 ಕೊರೊನಾ ಕೇಸ್ಗಳು ಪತ್ತೆಯಾಗಿದ್ದು, 325 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
![ದೇಶದಲ್ಲಿ ಕೊರೊನಾಗೆ 9,520 ಜನರು ಬಲಿ... ಸೋಂಕಿತರ ಸಂಖ್ಯೆ 3,32,424ಕ್ಕೆ ಏರಿಕೆ Total number of corona cases in India](https://etvbharatimages.akamaized.net/etvbharat/prod-images/768-512-7620412-thumbnail-3x2-megha.jpg)
ಭಾರತದಲ್ಲಿ ಕೊರೊನಾಗೆ 9,520 ಜನರು ಬಲಿ
ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 11,502 ಕೇಸ್ಗಳು ಪತ್ತೆಯಾಗಿದ್ದು, 325 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,32,424ಕ್ಕೆ ಹಾಗೂ ಮೃತರ ಸಂಖ್ಯೆ 9,520ಕ್ಕೆ ಏರಿಕೆಯಾಗಿದೆ.
ಗುಣಮುಖರ ಸಂಖ್ಯೆಯಲ್ಲಿ ಕೂಡ ಗಣನೀಯವಾಗಿ ಏರಿಕೆ ಕಂಡುಬರುತ್ತಿದ್ದು, ಈವರೆಗೆ 1,69,798 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 1,53,106 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.