ಕೋಲ್ಕತ್ತಾ:ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡದ 5ನೇ ಮಹಡಿಯಿಂದ ಜಿಗಿದು ರೋಗಿಯೊಬ್ಬ ಮೃತ ಪಟ್ಟಿದ್ದಾನೆ. ನ್ಯೂರೋ ಮೆಡಿಸಿನ್ ವಾರ್ಡ್‌ನಲ್ಲಿ ದಾಖಲಾಗಿದ್ದ ಗಿಯಾಸುದ್ದೀನ್ ಮೊಂಡಾಲ್(32) ಎಂಬ ವ್ಯಕ್ತಿ ಮೃತ ದುರ್ದೈವಿಯಾಗಿದ್ದಾನೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕೋಲ್ಕತ್ತಾ ವೈದ್ಯಕೀಯ ಕಾಲೇಜು ಕಟ್ಟಡದಿಂದ ಜಿಗಿದು ರೋಗಿ ಸಾವು.. - ಕಲ್ಕತ್ತಾ ವೈದ್ಯಕೀಯ ಕಾಲೇಜು
ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡದ 5ನೇ ಮಹಡಿಯಿಂದ ಜಿಗಿದು ರೋಗಿಯೊಬ್ಬ ಮೃತ ಪಟ್ಟಿದ್ದಾನೆ.
ಕಲ್ಕತ್ತಾ ವೈದ್ಯಕೀಯ ಕಾಲೇಜು ಕಟ್ಟಡದಿಂದ ಜಿಗಿದು ರೋಗಿ ಸಾವು
ನಿನ್ನೆ ಸಂಜೆ ಆಸ್ಪತ್ರೆಗೆ ಮೃತ ವ್ಯಕ್ತಿ ದಾಖಲಾಗಿದ್ದ. ಹೊಸದಾಗಿ ನಿರ್ಮಿಸಲಾದ ಸೂಪರ್ ಸ್ಪೆಷಾಲಿಟಿ ಕಟ್ಟಡದಿಂದ ಜಿಗಿದಿದ್ದಾನೆ. ಆಟೋ ಇಮ್ಯೂನ್ ಎನ್ಸೆಫಾಲಿಟಿಸ್ ಸಿಂಡ್ರೋಮ್ಸ್ನಿಂದ ಬಳಲುತ್ತಿದ್ದ ಗಿಯಾಸುದ್ದೀನ್ ಎಂಬ ರೋಗಿ ಮಾನಸಿಕ ಒತ್ತಡದಿಂದಾಗಿ ಜಿಗಿದಿದ್ದಾನೆಂದು ಸಿಎಮ್ಸಿಎಚ್ ಅಧೀಕ್ಷಕ ಇಂದ್ರನೀಲ್ ಬಿಸ್ವಾಸ್ ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ಆತನನ್ನು ತುರ್ತು ನಿಗಾ ಘಟಕಕ್ಕೆ ಕೊಂಡೊಯ್ಯವಷ್ಟರಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಬೌಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
TAGGED:
ಕಲ್ಕತ್ತಾ ವೈದ್ಯಕೀಯ ಕಾಲೇಜು