ಪಾಟ್ನಾ(ಬಿಹಾರ):ಮಕ್ಕಳ ಕಳ್ಳನೆಂದು ಅನುಮಾನಗೊಂಡು ವಿಕಲಚೇತನ ವ್ಯಕ್ತಿಯನ್ನು ಹೊಡೆದು ಕೊಂದ ಆರೋಪದ ಮೇಲೆ ಬಿಹಾರದ ದಾನಪುರದ 32 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಕಲಚೇತನ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಕೊಂದ ಪ್ರಕರಣದಲ್ಲಿ ಹಲವಾರು ಮಂದಿ ವಿರುದ್ಧ ದೂರು ದಾಖಲಾಗಿತ್ತು. ಆರು ಮಹಿಳೆಯರು ಸೇರಿ ಒಟ್ಟು 32 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಸಂಕ್ಷಿಪ್ತ ವಿವರ:
ಮಕ್ಕಳ ಕಳ್ಳರೆಂದು ತಪ್ಪು ತಿಳಿದ ಜನರು ಇಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿದ್ದರು. ವಿಚಾರ ತಿಳಿದು, ಸ್ಥಳಕ್ಕಾಗಮಿಸಿದ ಪೊಲೀಸರು, ಹಲ್ಲೆಗೊಳಗಾಗುತ್ತಿದ್ದ ಇಬ್ಬರನ್ನು ಪಾರು ಮಾಡಲು ಹರಸಾಹಸ ಪಡಬೇಕಾಯ್ತು. ಈ ವೇಳೆ ಎಎಸ್ಐ ದರ್ಜೆ ಅಧಿಕಾರಿಗೂ ಗಾಯವಾಗಿತ್ತು.