ಕರ್ನಾಟಕ

karnataka

By

Published : Mar 31, 2020, 5:01 AM IST

ETV Bharat / bharat

ತಿಂಗಳ ಕೊನೆಯ ದಿನ...ಇಂದು ನಿಮ್ಮ ರಾಶಿಫಲ ಹೇಗಿದೆ...?

ಮಂಗಳವಾರದ ರಾಶಿಫಲ

31March 2020 Astrology
31 ಮಾರ್ಚ್ 2020 ರಾಶಿಭವಿಷ್ಯ

ಮೇಷ

ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನೀವು ಸಂಪತ್ತು ಮತ್ತು ಆನಂದ ತಂದುಕೊಡುತ್ತೀರಿ. ಯಾವುದೂ ಉಚಿತವಾಗಿ ದೊರೆಯುವುದಿಲ್ಲ. ಈಗಾಗಲೇ ಕಮಿಟ್ ಆಗಿರುವವರು ತಮ್ಮ ಪ್ರೀತಿಪಾತ್ರರೊಂದಿಗೆ ಉತ್ಸಾಹದ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಇನ್ನೂ ಕಮಿಟ್ ಆಗದೇ ಇರುವವರು ಯಾರೋ ಒಬ್ಬರ ಪ್ರೀತಿಯಲ್ಲಿ ಬೀಳುತ್ತಾರೆ.

ವೃಷಭ

ಈ ದಿನ ಸಂಪತ್ತಿನ ವಿಷಯದಲ್ಲಿ ಸುವರ್ಣಾವಕಾಶ ತರಲಿದೆ. ಆರೋಗ್ಯ ಮತ್ತು ಸಂಪತ್ತು, ಎರಡೂ ಈ ದಿನ ನಿಮ್ಮ ಕಡೆಗಿವೆ. ಆಭರಣ ವಿನಿಮಯ ನಿಮ್ಮ ಬಾಂಧವ್ಯದಲ್ಲಿ ಕಿಡಿಯನ್ನು ತರಲಿದೆ. ನೀವು ಮೋಸಗೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರವಾಗಿರಿ ಮತ್ತು ಕಣ್ಣುಗಳನ್ನು ತೆರೆದಿರಿ.

ಮಿಥುನ

ನಿಮ್ಮ ಪ್ರೀತಿಪಾತ್ರರ ಭಾವನೆಗಳ ದಾರಿಯಲ್ಲಿ ಯಾರೋ ಒಬ್ಬರ ಅಹಂ ಅಡ್ಡಿಬರುವ ವಿಚಾರ ನಿಮಗೆ ಅರಿವಾಗುವುದಿಲ್ಲ. ಇಂದು ನೀವು ಸಣ್ಣ ಪ್ರವಾಸ ಮಾಡುವ ಮನಸ್ಥಿತಿಯಲ್ಲಿರುತ್ತೀರಿ ಅದು ಕೆಲಸಕ್ಕೆ ಸಂಬಂಧಿಸಿದ್ದಾಗಿರಬಹುದು ಅಥವಾ ವಿನೋದಕ್ಕೆ ಆಗಿರಬಹುದು. ಕೆಲಸದ ನಡುವೆ ವಿಶ್ರಾಂತಿಗೆ ನೀವು ಗಮನ ನೀಡುವುದಿಲ್ಲ . ನಿಮ್ಮದೇ ಭಾವನೆ ಹೊಂದಿರುವ ಜನರ ಜೊತೆ ಸಂಜೆಯನ್ನು ಕಳೆಯುತ್ತೀರಿ.

ಕರ್ಕಾಟಕ

ನಿಮ್ಮ ಗಮನ ಸಾಮಾಜಿಕ ಬದ್ಧತೆಗಳ ಕಡೆಗೆ ಬದಲಾಗುತ್ತಿರುವಂತಿದೆ, ಮತ್ತು ಇದಕ್ಕೆ ಕಾರಣ ಒಳ್ಳೆಯ ಹಣಕಾಸಿನ ಬೆಂಬಲ. ಮಧ್ಯಾಹ್ನದಲ್ಲಿ ನೀವು ಏಕಾಂಗಿಯಾಗಿ ಕೊಂಚ ಸಮಯ ಕಳೆಯಲು ಬಯಸಬಹುದು. ಸಂಜೆಗೆ, ನೀವು ನಿಮ್ಮ ದೃಷ್ಟಿಕೋನ ಬಯಸುವ ಜನರ ನಡುವೆ ಕೇಂದ್ರಸ್ಥಾನದಲ್ಲಿ ಕಾಣುತ್ತೀರಿ.

ಸಿಂಹ

ಯಾವುದೇ ಬಗೆಯ ಕುಟಿಲತೆಗೆ ಮತ್ತು ಕೆಟ್ಟ ವಿಷಯಗಳಿಗೆ ಅವಕಾಶ ನೀಡಬೇಡಿ. ನಿಮ್ಮ ತಾರೆಗಳು ನಿಮ್ಮನ್ನು ಅಪಾಯಕಾರಿ ಸನ್ನಿವೇಶಕ್ಕೆ ಒತ್ತಾಯಿಸಬಹುದು. ಕೆಲಸದ ವಿಷಯದಲ್ಲಿ, ಶಾಂತಿ ಕಾಪಾಡಿಕೊಳ್ಳಿ. ಮತ್ತು ದಿನದ ಅಂತ್ಯಕ್ಕೆ ನಿಮಗೆ ತೊಂದರೆ ಕೊಡುತ್ತಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು. ನೀವು ಶಾಂತವಾಗಿದ್ದರೆ ಎಲ್ಲವೂ ತನ್ನಿಂತಾನೆ ಪರಿಹಾರವಾಗುತ್ತದೆ.

ಕನ್ಯಾ

ಇಂದು ನಿಮ್ಮ ಬಹುತೇಕ ಗಮನ ನಿಮ್ಮ ಹಣಕಾಸಿನ ಲಾಭಗಳಿಗೆ ಹೋಗುವಂತೆ ಕಾಣುವ ದಿನವಾಗಿದೆ. ನೀವು ಭವಿಷ್ಯವನ್ನು ಯೋಜಿಸುತ್ತಿರಬಹುದು ಮತ್ತು ಬಿಕ್ಕಟ್ಟಿಗೆ ಸಜ್ಜಾಗುತ್ತಿರಬಹುದು. ನಿಮ್ಮ ತಾರೆಗಳ ಸೂಚನೆಯ ಪ್ರಕಾರ ಕೆಲ ಕಾಗದಪತ್ರಗಳು ಸದ್ಯದಲ್ಲೇ ನಿಮ್ಮ ಭವಿಷ್ಯದ ಮೈಲಿಗಲ್ಲುಗಳನ್ನು ನಿರ್ಧರಿಸಬಹುದು.

ತುಲಾ

ಇಂದು ನೀವು ನಿಮಗಿಷ್ಟವಾದ ಮೃಷ್ಟಾನ್ನ ಭೋಜನ ಸವಿಯುವ ಅವಕಾಶ ದೊರೆಯಲಿದೆ. ನೀವು ಇಂದು ಗೊಂದಲದಲ್ಲಿರುತ್ತೀರಿ, ಆದರೆ ನೀವು ಅಂದುಕೊಂಡದ್ದನ್ನು ಸಾಧಿಸಲು ಹಲವು ಅವಕಾಶಗಳಿರುವುದರಿಂದ ನಿರಾಶೆಗೊಳ್ಳುವ ಅಗತ್ಯವಿಲ್ಲ. ದಿನ ಮುಂದುವರೆದಂತೆ, ಜೀವನದಲ್ಲಿ ಹಣಕಾಸಿನ ಅನುಕೂಲಗಳು ಸರಿ ಹೋಗಲಿವೆ. ನಿಮ್ಮ ಭವಿಷ್ಯ ಉತ್ತಮಪಡಿಸಲು ನೆರವಾಗುವ ವಿಷಯದ ಹುಡುಕಾಟದಲ್ಲಿದ್ದೀರಿ. ಅದು ನಿಮಗೆ ಖಂಡಿತ ಲಭಿಸುತ್ತದೆ. ಇಂದು ನಿಮ್ಮ ಎಲ್ಲಾ ಬಯಕೆಗಳು ಈಡೇರುವ ಸಾಧ್ಯತೆ ಇದೆ.

ವೃಶ್ಚಿಕ

ಈ ದಿನ ನಿಮ್ಮಂತೆಯೇ ಆಲೋಚಿಸುವ ಜನರೊಂದಿಗೆ ಸೇರಿಕೊಳ್ಳುವುದರಿಂದ ಉತ್ಸಾಹದಿಂದ ಕೂಡಿರುತ್ತದೆ. ಈ ದಿನ ನಿಮ್ಮನ್ನು ಒಂದಲ್ಲಾ ಒಂದು ಚಟುವಟಿಕೆಯಿಂದ ತೊಡಗಿಸಿರುತ್ತದೆ. ಎಚ್ಚರದಿಂದಿರಿ ಉದ್ವೇಗಗೊಳ್ಳಬೇಡಿ, ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಈ ದಿನ ನಿಮಗೆ ಅತ್ಯಂತ ಶಕ್ತಿ ನೀಡುತ್ತದೆ ಮತ್ತು ನೀವು ಪ್ರೀತಿಸುವ ಜನರೊಂದಿಗೆ ಹೊರಗೆ ಸುತ್ತಾಡಲು ಪ್ರಯತ್ನಿಸುತ್ತೀರಿ.

ಧನು

ನಿಮ್ಮ ವೈಯಕ್ತಿಕ ವಸ್ತುಗಳ ಕುರಿತು ಪ್ರೀತಿ ಹೆಚ್ಚಾಗುತ್ತದೆ. ಅಭೂತಪೂರ್ವ ಪ್ರೇಮ ವ್ಯವಹಾರಗಳನ್ನು ಹೊಂದುವ ಅದೃಷ್ಟವಂತರಾಗಿರಬಹುದು. ಇದುವರೆಗೂ ಮುಂದೂಡುತ್ತಿದ್ದ ಕೆಲಸ ಇಂದು ಸುಲಭವಾಗಿ ಪೂರ್ಣಗೊಳ್ಳುತ್ತದೆ. ಈ ಅದೃಷ್ಟದ ದಿನದಂದು ಗ್ರಹಗತಿಗಳು ನಿಮಗೆ ಒಳ್ಳೆಯದುಂಟುಮಾಡುತ್ತವೆ.

ಮಕರ

ನಿಮ್ಮ ಭುಜಗಳ ಮೇಲೆ ಇರುವ ಕೆಲಸದ ಭಾರದಿಂದ ನೀವು ಬಹಳ ಒತ್ತಡದ ಭಾವನೆ ಅನುಭವಿಸುತ್ತೀರಿ. ಆದರೆ ವೃತ್ತಿಪರರಾಗಿ ನೀವು ಸುಲಭವಾಗಿ ಕೈ ಬಿಡುವವರಲ್ಲ. ಇಂದು ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಸಾಮರ್ಥ್ಯವನ್ನು ಗುರುತಿಸುತ್ತಾರೆ ಮತ್ತು ನಿಮ್ಮ ದಾರಿಯಲ್ಲಿ ಬೆಂಬಲ ಸೂಚಿಸುತ್ತಾರೆ.

ಕುಂಭ

ಪ್ರಾರಂಭಿಕವಾಗಿ, ನಿಮಗೆ ಕೆಲಸ ಮಾಡಲು ಶಕ್ತಿಯೇ ಇಲ್ಲ ಎಂದು ಭಾವಿಸುತ್ತೀರಿ. ಆದ ಕಾರಣ ನಿಮ್ಮ ಕೆಲಸದಲ್ಲಿ ಶ್ರಮ ವಹಿಸುತ್ತೀರಿ. ಆದರೆ ಇದು ಬೇಗ ಸುಧಾರಣೆಯಾಗುತ್ತದೆ ನಿಮ್ಮ ಸುತ್ತಲಿನ ವ್ಯಕ್ತಿಗಳಿಂದ ಶುಭಸುದ್ದಿ ದೊರೆಯುತ್ತದೆ. ನೀವು ಇರುವ ಸ್ಥಾನ ಕಾಪಾಡಿಕೊಳ್ಳಲು, ಎಚ್ಚರದಿಂದಿರಿ ಮತ್ತು ಎಲ್ಲಾ ಸಮಯಗಳಲ್ಲೂ ನಿಮ್ಮ ಗಡುವುಗಳನ್ನು ಮುಟ್ಟಿರಿ.

ಮೀನ

ಗ್ರಹಗತಿಗಳು ನಿಮ್ಮ ಕಡೆ ಇರುವುದರಿಂದ ನೀವು ನಿಮ್ಮ ಕುಟುಂಬದವರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ ಎಂದು ತೋರಿಸುತ್ತಿದೆ. ಈ ದಿನ ಸಂಪೂರ್ಣ ನಿಮಗೆ ಅನುಕೂಲಕರವಾಗಬಹುದು. ಕೆಲಸದ ವಿಷಯದಲ್ಲಿ ವಿಭಿನ್ನ ರೀತಿಯ ಉತ್ಸಾಹ ಅನುಭವಿಸುತ್ತೀರಿ. ಅತ್ಯುತ್ತಮವಾದುದರ ನಿರೀಕ್ಷೆ ಮಾಡುವುದರಲ್ಲಿ ತಪ್ಪೇನೂ ಇಲ್ಲ.

ABOUT THE AUTHOR

...view details