ಲೇಹ್ (ಲಡಾಖ್):ಕಳೆದ ತಿಂಗಳು ಹಿಂಸಾತ್ಮಕ ಮುಖಾಮುಖಿಯಾದ ಬಳಿಕ ಮೂರು ಬ್ರಿಗೇಡ್‌ಗಳನ್ನು ಹೆಚ್ಚುವರಿಯಾಗಿ ಗಡಿಯಲ್ಲಿ ನಿಯೋಜಿಸಿದ್ದು, ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭಾರತೀಯ ಸೇನೆಯ ಸುಮಾರು 30,000 ಯೋಧರನ್ನು ನಿಯೋಜಿಸಲಾಗಿದೆ.
ರೊಟೇಶನ್ ಆಧಾರದ ಮೇಲೆ ಸೈನ್ಯವನ್ನು ನಿಯೋಜಿಸಲಾಗಿದ್ದು, ಸಾಮಾನ್ಯ ಕಾಲದಲ್ಲಿ ಆರು ಬ್ರಿಗೇಡ್‌ಗಳು, ಅಂದರೆ ಎರಡು ವಿಭಾಗಗಳು ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಕಾರ್ಯನಿರ್ವಹಿಸುತ್ತಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೂನ್ 15ರ ಹಿಂಸಾತ್ಮಕ ಘರ್ಷಣೆಯಲ್ಲಿ ಕಮಾಂಡರ್ ಸೇರಿದಂತೆ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, 70ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದರು. ಸೈನ್ಯವು ಮೂರು ಹೆಚ್ಚುವರಿ ಬ್ರಿಗೇಡ್‌ಗಳನ್ನು ನಿಯೋಜಿಸಿದೆ. ಪ್ರತಿ ಬ್ರಿಗೇಡ್‌ನಲ್ಲಿ ಸುಮಾರು 3,000 ಸೈನಿಕರು ಇರಲಿದ್ದಾರೆ.
ಮೂರು ಹೆಚ್ಚುವರಿ ಬ್ರಿಗೇಡ್‌ಗಳಿಗಾಗಿ ಸುಮಾರು 10,000 ಸೈನಿಕರನ್ನು ಪಂಜಾಬ್, ಹಿಮಾಚಲಪ್ರದೇಶ ಮತ್ತು ಉತ್ತರ ಪ್ರದೇಶದಿಂದ ಕರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ವಿರುದ್ಧದ 2017ರ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆಲವು ಪ್ಯಾರಾ ವಿಶೇಷ ಪಡೆಗಳನ್ನು ಸಹ ಲಡಾಖ್‌ಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.