ಕರ್ನಾಟಕ

karnataka

By

Published : Jan 27, 2021, 4:19 AM IST

Updated : Jan 27, 2021, 4:55 AM IST

ETV Bharat / bharat

ಹಿಂಸಾತ್ಮಕ ಪ್ರತಿಭಟನೆ ನಡುವೆಯೂ 300 ಮಂದಿ ಗಣರಾಜ್ಯೋತ್ಸವ ಕಲಾವಿದರ ರಕ್ಷಿಸಿದ ಪೊಲೀಸರು

ಕೃಷಿ ಕಾಯ್ದೆ ವಿರೋಧಿ ಟ್ರ್ಯಾಕ್ಟರ್​ ಪರೇಡ್​ ಹಿಂಸಾತ್ಮಕ ಸ್ವರೂಪ ಪಡೆದ ಸಂದರ್ಭ ಕೆಂಪುಕೋಟೆಯಲ್ಲಿ ಸಿಲುಕಿದ್ದ ಮಕ್ಕಳು ಸೇರಿದಂತೆ 300 ಕಲಾವಿದರನ್ನು ಪೊಲೀಸರು ರಕ್ಷಿಸಿದ್ದಾರೆ.

300-r-day-artiste-rescued-after-being-stranded-at-red-fort-says-delhi-police
ಟ್ರ್ಯಾಕ್ಟರ್​ ಪರೇಡ್

ನವದೆಹಲಿ:ಹಿಂಸಾತ್ಮಕ ಸ್ವರೂಪ ಪಡೆದ ಕೃಷಿ ಕಾಯ್ದೆ ವಿರೋಧಿ ಟ್ರ್ಯಾಕ್ಟರ್​ ಪರೇಡ್​ ವೇಳೆ ಕೆಂಪುಕೋಟೆಯಲ್ಲಿ ಸಿಲುಕಿದ್ದ ಗಣರಾಜ್ಯೋತ್ಸವದ ಮೆರವಣಿಗೆಯ ಭಾಗವಾಗಿದ್ದ ಮಕ್ಕಳು ಸೇರಿದಂತೆ ಸುಮಾರು 300 ಕಲಾವಿದರನ್ನು ರಕ್ಷಿಸಲಾಗಿದೆ.

ಕೃಷಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರು ಬ್ಯಾರಿಕೇಡ್​ಗಳನ್ನು ಮುರಿದು ಮೊಘಲ್ ಯುಗದ ಸ್ಮಾರಕಕ್ಕೆ ಪ್ರವೇಶಿಸಿದ್ದರು. ಪರಿಸ್ಥಿತಿ ನಿಯಂತ್ರಣ ಕಳೆದುಕೊಂಡು ಹಿಂಸಾತ್ಮಕ ಸ್ವರೂಪ ಪಡೆದಿತ್ತು. ಹಿಂಸಾತ್ಮಕ ಪ್ರತಿಭಟನೆಯ ನಡುವೆಯೂ ಎಚ್ಚೆತ್ತ ಪೊಲೀಸರು ಮಕ್ಕಳು ಸೇರಿ 300 ಕಲಾವಿದರನ್ನು ರಕ್ಷಿಸಿದ್ದಾರೆ.

ಕೆಂಪು ಕೋಟೆಯಲ್ಲಿ ಮಕ್ಕಳು ಸೇರಿದಂತೆ ಸುಮಾರು 300 ಕಲಾವಿದರು ಇದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು ಎಂದು ಉತ್ತರ ದೆಹಲಿ ಡಿಸಿಪಿ ಆಂಟೊ ಅಲ್ಫೋನ್ಸ್ ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಜಾಪ್ರಭುತ್ವದಲ್ಲಿ ಅರಾಜಕತೆಗೆ ಸ್ಥಾನವಿಲ್ಲ: ರೈತ ಪರೇಡ್​ ಹಿಂಸಾಚಾರಕ್ಕೆ RSS ಖಂಡನೆ

ದೆಹಲಿಯ ಐಟಿಒ ಪ್ರದೇಶ ಸೇರಿ ಹಲವೆಡೆ ರೈತರು ಟ್ರ್ಯಾಕ್ಟರ್​ ಪರೇಡ್​ ನಡೆಸಿದ್ದರು. ಈ ವೇಳೆ ಹಿಂಸಾತ್ಮಕ ಕೃತ್ಯದಿಂದ ಬಸ್​, ವಾಹನಗಳು​ ಸೇರಿದಂತೆ ಸಾರ್ವಜನಿಕ ಆಸ್ತಿ ಹಾನಿಯಾಗಿತ್ತಲ್ಲದೆ, 86 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

Last Updated : Jan 27, 2021, 4:55 AM IST

ABOUT THE AUTHOR

...view details