ಕರ್ನಾಟಕ

karnataka

ವಿವಾಹ ಔತಣಕೂಟದಲ್ಲಿ ವಿಷಾಹಾರ ಸೇವನೆ, 300 ಕ್ಕೂ ಹೆಚ್ಚು ಜನ ಅಸ್ವಸ್ಥ

By

Published : Feb 7, 2021, 1:33 PM IST

ಮದುವೆ ಔತಣಕೂಟದಲ್ಲಿ ವಿಷಪೂರಿತ ಆಹಾರ ಸೇವಿಸಿದ ಪರಿಣಾಮ 300 ಕ್ಕೂ ಹೆಚ್ಚು ಜನ ತೀವ್ರ ಹೊಟ್ಟೆ ನೋವು, ಜ್ವರ ಮತ್ತು ಅತಿಸಾರದಿಂದ ಬಳಲುತ್ತಿದ್ದಾರೆ.

ವಿವಾಹ ಔತಣಕೂಟದಲ್ಲಿ ವಿಷಾಹಾರ ಸೇವನೆ
ವಿವಾಹ ಔತಣಕೂಟದಲ್ಲಿ ವಿಷಾಹಾರ ಸೇವನೆ

ಪುರಿ (ಒಡಿಶಾ):ಒಡಿಶಾದ ಪುರಿ ಜಿಲ್ಲೆಯ ಕನಾಸ್ ಬ್ಲಾಕ್‌ನ ವ್ಯಾಪ್ತಿಯಲ್ಲಿರುವ ಸಹನಾ ಗ್ರಾಮದಲ್ಲಿ ನಡೆದ ವಿವಾಹದಲ್ಲಿ ಊಟ ಸೇವಿಸಿದ 300 ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ಮದುವೆ ಔತಣಕೂಟದಲ್ಲಿ ವಿಷಪೂರಿತ ಆಹಾರ ಸೇವಿಸಿದ ಪರಿಣಾಮ 300 ಕ್ಕೂ ಹೆಚ್ಚು ಜನ ತೀವ್ರ ಹೊಟ್ಟೆ ನೋವು, ಜ್ವರ ಮತ್ತು ಅತಿಸಾರದಿಂದ ಬಳಲುತ್ತಿದ್ದಾರೆ.

ಸಹನಾ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಗ್ರಾಮಸ್ಥರು, ಊಟ ಸೇವಿಸಿ ಮನೆಗೆ ಹಿಂದಿರುಗಿದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ವರದಿಯಾಗಿದೆ.

ಅವರನ್ನು ತಕ್ಷಣ ಕನಾಸ್ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ದಾಖಲಿಸಲಾಯಿತು.

ಇದನ್ನೂ ಓದಿ:ಕೇರಳದಲ್ಲಿ ಮೊಟ್ಟಮೊದಲ ಮಾನವ ಎದೆ ಹಾಲು ಬ್ಯಾಂಕ್ ಕಾರ್ಯಾರಂಭ

ABOUT THE AUTHOR

...view details