ಕರ್ನಾಟಕ

karnataka

ETV Bharat / bharat

ಈ ಮೇಳದಲ್ಲಿ ಮನಸೆಳೆದ ಬಲ‘ಭೀಮ’.. ಈತನ ಬೆಲೆ ಕೇಳಿದ್ರೆ ದಂಗಾಗ್ತೀರಾ..! ಅಬ್ಬಬ್ಬಾ ಅಂದ್ರೆ ಎಷ್ಟಿರಬಹುದು!! - ರಾಜಸ್ತಾನ ದಲ್ಲಿ ಅಂತಾರಾಷ್ಟ್ರೀಯ ಪುಷ್ಕರ್ ಜಾನುವಾರು ಮೇಳ

ರಾಜಸ್ತಾನದ ಅಜ್ಮೇರದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪುಷ್ಕರ್ ಜಾನುವಾರು ಮೇಳದಲ್ಲಿ ದೇಶ-ವಿದೇಶಗಳ ವಿವಿಧ ತಳಿಗಳನ್ನು ಪ್ರದರ್ಶಿಸಲಾಗಿದೆ. ಈ ಜಾನುವಾರು ಮೇಳದಲ್ಲಿ ಭೀಮ ಎಲ್ಲರ ಚಿತ್ತ ತನ್ನತ್ತ ಸೆಳೆದಿದೆ.

ಮೇಳದಲ್ಲಿ ಮನಸೆಳೆದ ‘ಭೀಮ’..

By

Published : Nov 5, 2019, 10:20 AM IST

ಅಜ್ಮೇರ: ರಾಜಸ್ತಾನದ ಅಜ್ಮೇರದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪುಷ್ಕರ್ ಜಾನುವಾರು ಮೇಳದಲ್ಲಿ ದೇಶ-ವಿದೇಶಗಳ ವಿವಿಧ ತಳಿಗಳನ್ನು ಪ್ರದರ್ಶಿಸಲಾಗಿದೆ. ಈ ಜಾನುವಾರು ಮೇಳದಲ್ಲಿ ಭೀಮ ಎಲ್ಲರ ಚಿತ್ತ ತನ್ನತ್ತ ಸೆಳೆದಿದೆ.

ಹೌದು, ಜೋಧಪುರದ ನಿವಾಸಿ ಅರವಿಂದ್ ಜಂಗಿದ್ ಅವರಿಗೆ ಸೇರಿದ ಭೀಮ ಎಂಬ ಕೋಣ ಜಾನುವಾರು ಮೇಳದಲ್ಲಿ ಸಖತ್​ ಫೇಮಸ್​. ಮುರ್ರಾ ತಳಿಗೆ ಸೇರಿದ ಭೀಮನ ಬೆಲೆ ಸರಾಸರಿ 15 ಕೋಟಿ ರೂಪಾಯಿ. ಭೀಮನಿಗಾಗಿಯೇ ಆಹಾರ ತಜ್ಞರು ಡಯೆಟ್​ ಚಾರ್ಟ್​ ತಯಾರಿಸುತ್ತಾರೆ.

ಭೀಮನಿಗೆ ಬಾಲ್ಯದಿಂದಲೂ ವಿಶೇಷ ಕಾಳಜಿ ನೀಡಿ ಬೆಳೆಸಲಾಗಿದೆ. ವೈದ್ಯರ ಸಲಹೆಯೊಂದಿಗೆ ಪ್ರತಿದಿನ 20 ಕೆಜಿ ಹಾಲು ಮತ್ತು ಒಂದು ಕೆಜಿ ಲ್ಯಾಪ್ಸಿ ನೀಡಲಾಗುತ್ತದೆ. ಭೀಮನ ತೂಕ ಬರೋಬ್ಬರಿ 1,300 ಕೆಜಿ. ಭೀಮ ಎಲ್ಲರ ಅಚ್ಚುಮೆಚ್ಚಿನ ಜಾನುವಾರು ಎಂದು ಮಾಲೀಕ ಅರವಿಂದ್ ಜಂಗಿದ್ ಸಂತಸ ಹಂಚಿಕೊಂಡರು.

ಅಂತಾರಾಷ್ಟ್ರೀಯ ಪುಷ್ಕರ್ ಮೇಳದಲ್ಲಿ ಭೀಮ ಎರಡನೇ ಬಾರಿಗೆ ಭಾಗವಹಿಸಿದೆ. ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರ ಬಿಂದುವಾಗಿರುವ ಭೀಮ ಜತೆ ಪ್ರತಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಿ ಆನಂದಿಸುತ್ತಿದ್ದಾರೆ.

For All Latest Updates

ABOUT THE AUTHOR

...view details