ಕರ್ನಾಟಕ

karnataka

ETV Bharat / bharat

ಕೊರೊನಾ ಭೀತಿ: ಕರ್ನಾಟಕ ಸೇರಿ 30 ರಾಜ್ಯ, ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಲಾಕ್​ಡೌನ್​​​​ - 30 ರಾಜ್ಯಗಳು ಲಾಕ್​ಡೌನ್​

ಭಾರತದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ವೈರಸ್​ ತಡೆಗಟ್ಟಲು ಕೇಂದ್ರ ಸರ್ಕಾರ ಟೊಂಕ ಕಟ್ಟಿ ನಿಂತಿದ್ದು, ಇದೀಗ ಕೆಲವೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

30 States Under Total Lockdown As Coronavirus Cases
30 States Under Total Lockdown As Coronavirus Cases

By

Published : Mar 23, 2020, 11:32 PM IST

ಹೈದರಾಬಾದ್​: ಮಹಾಮಾರಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಡೆಡ್ಲಿ ವೈರಸ್​​ ಅಟ್ಟಹಾಸದಿಂದ ಪಾರಾಗಲು ಇಡೀ ವಿಶ್ವವೇ ಪಣ ತೊಟ್ಟು ನಿಂತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಅನೇಕ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ.

ಭಾನುವಾರವಷ್ಟೇ ದೇಶಾದ್ಯಂತ ಜನತಾ ಕರ್ಫ್ಯೂ ಹೇರಿದ್ದ ಕೇಂದ್ರ, ಇದೀಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಮಹಾಮಾರಿ ವಿರುದ್ಧ ಹೋರಾಡಲು ಕೇಂದ್ರ ಇದೀಗ 30 ರಾಜ್ಯಗಳು ಹಾಗೂ 548 ಜಿಲ್ಲೆಗಳನ್ನೊಳಗೊಂಡ ಕೇಂದ್ರಾಡಳಿತ ಪ್ರದೇಶಗಳನ್ನು ಲಾಕ್​ಡೌನ್​ ಮಾಡಿ ಆದೇಶ ಹೊರಡಿಸಿದೆ.

ದೇಶಾದ್ಯಂತ 471 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಕಳೆದ 24 ಗಂಟೆಯಲ್ಲೇ ಬರೋಬ್ಬರಿ 75 ಹೊಸ ಕೇಸ್​ಗಳು ಸೇರ್ಪಡೆಯಾಗಿವೆ. ಹೀಗಾಗಿ ಇದೀಗ 30 ರಾಜ್ಯಗಳನ್ನು ಲಾಕ್​ಡೌನ್​ ಮಾಡಿ ಆದೇಶ ಹೊರಡಿಸಲಾಗಿದೆ.

ಲಾಕ್​ಡೌನ್​ ಆದ ರಾಜ್ಯಗಳು

  1. ಚಂಡೀಘಡ
  2. ನವದೆಹಲಿ
  3. ಗೋವಾ
  4. ಜಮ್ಮು-ಕಾಶ್ಮೀರ
  5. ನಾಗಾಲ್ಯಂಡ್​
  6. ರಾಜಸ್ಥಾನ
  7. ಉತ್ತರಾಖಂಡ್​
  8. ಪಶ್ಚಿಮ ಬಂಗಾಳ
  9. ಲಡಾಖ್​
  10. ಜಾರ್ಖಂಡ್​
  11. ಅರುಣಾಚಲಪ್ರದೇಶ
  12. ಬಿಹಾರ
  13. ತ್ರಿಪುರಾ
  14. ತೆಲಂಗಾಣ
  15. ಛತ್ತೀಸ್​​ಘಡ
  16. ಪಂಜಾಬ್​
  17. ಹಿಮಾಚಲಪ್ರದೇಶ
  18. ಮಹಾರಾಷ್ಟ್ರ
  19. ಆಂಧ್ರ ಪ್ರದೇಶ
  20. ಮೆಘಾಲಯ
  21. ಮಣಿಪುರ
  22. ಹರಿಯಾಣ
  23. ತಮಿಳುನಾಡು
  24. ಕೇರಳ
  25. ದಮನ್​ ದಿಯೋ & ದಾದ್ರಾ & ನಗರ್ ​ಹವೇಲಿ
  26. ಪಾಂಡಿಚೇರಿ
  27. ಅಂಡಮಾನ್​-ನಿಕೋಬಾರ್​
  28. ಗುಜರಾತ್​
  29. ಕರ್ನಾಟಕ
  30. ಅಸ್ಸೋಂ

ಇಂದು ಮಧ್ಯರಾತ್ರಿಯಿಂದಲೇ ಎಲ್ಲಾ ದೇಶೀಯ ವಿಮಾನಯಾನ ಸೇವೆ ರದ್ದುಗೊಂಡಿದ್ದು, ಕೆಲವೊಂದು ರಾಜ್ಯಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ABOUT THE AUTHOR

...view details