ಕರ್ನಾಟಕ

karnataka

ETV Bharat / bharat

ಆರ್ಟಿಕಲ್​ 370 ರದ್ದು: 70 ಉಗ್ರರು, 30 ಕೈದಿಗಳು ಆಗ್ರಾ ಜೈಲಿಗೆ ರವಾನೆ! - 70 ಉಗ್ರರು

ಆರ್ಟಿಕಲ್​​ 370 ರದ್ದು ಆಗುತ್ತಿದ್ದಂತೆ ಜಮ್ಮು-ಕಾಶ್ಮೀರದಲ್ಲಿ ಪೊಲೀಸರು ಅಲರ್ಟ್​ ಆಗಿದ್ದು, ತಮ್ಮ ವಶದಲ್ಲಿದ್ದ 70 ಉಗ್ರರು ಹಾಗೂ 30 ಕೈದಿಗಳನ್ನ ತಕ್ಷಣವೇ ಆಗ್ರಾ ಜೈಲಿಗೆ ರವಾನೆ ಮಾಡಿದ್ದಾರೆ.

ಆರ್ಟಿಕಲ್​ 370 ರದ್ದು/Agra Central Jail

By

Published : Aug 8, 2019, 11:30 PM IST

ಶ್ರೀನಗರ:ಆರ್ಟಿಕಲ್​ 370 ರದ್ದು ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಇದರ ಮಧ್ಯೆ ಜಮ್ಮು-ಕಾಶ್ಮೀರದ ಜೈಲಿನಲ್ಲಿದ್ದ 70 ಉಗ್ರರು ಹಾಗೂ 30 ಕೈದಿಗಳನ್ನ ಆಗ್ರಾದ ಸೆಂಟ್ರಲ್​ ಜೈಲಿಗೆ ಶಿಫ್ಟ್​ ಮಾಡಲಾಗಿದೆ.

ಪೊಲೀಸ್​ ವ್ಯಾನ್​​​ನಲ್ಲಿ ಏರ್​​​ಪೋರ್ಟ್​ ಕರೆದ್ಯೊಯಲಾಗಿದ್ದು, ಬಳಿಕ ಅವರನ್ನ ವಿಶೇಷ ವಿಮಾನದ ಮೂಲಕ ಭಾರಿ ಪೊಲೀಸ್​ ಬಂದೋಬಸ್ತ್​​ನಲ್ಲಿ ಆಗ್ರಾ ಜೈಲಿಗೆ ಶಿಫ್ಟ್​ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಗೆ ಅವರನ್ನ ಕರೆದುಕೊಂಡು ಹೋಗಲಾಗಿದ್ದು, ಎಲ್ಲರೂ 2:45ಗೆ ಆಗ್ರಾ ಜೈಲು ಸೇರಿದ್ದಾರೆ.

ಆರ್ಟಿಕಲ್​ 370 ರದ್ದು/Agra Central Jail

ಕಣಿವೆ ನಾಡಿಗೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಅಲ್ಲಿ ಹೆಚ್ಚಿನ ಸೇನಾ ಪಡೆ ಜಮಾವಣೆ ಮಾಡಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಇದರ ಮಧ್ಯೆ ನಿನ್ನೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಕಣಿವೆ ನಾಡಿಗೆ ಭೇಟಿ ನೀಡಿ, ಅಲ್ಲಿನ ನಾಗರಿಕರು, ಪೊಲೀಸರು ಹಾಗೂ ಸೇನಾ ಸಿಬ್ಬಂದಿ ಜತೆ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ABOUT THE AUTHOR

...view details