ಕರ್ನಾಟಕ

karnataka

ETV Bharat / bharat

ಜೂಜಾಟದ ವೇಳೆ ದುರಂತ: ಮಣ್ಣು ಕುಸಿದು ಮೂವರು ಯುವಕರ ದುರ್ಮರಣ - ಜೂಜಾಡುತ್ತಿದ್ದ ವೇಳೆ ಮಣ್ಣು ಕುಸಿತ

ಔರಂಗಾಬಾದ್​ ಜಿಲ್ಲೆಯ ಗ್ರಾಮವೊಂದರಲ್ಲಿ ಗುಂಡಿಯಲ್ಲಿ ಕುಳಿತು ಜೂಜಾಡುತ್ತಿದ್ದ ವೇಳೆ ಮಣ್ಣು ಕುಸಿದು ಬಿದ್ದು, ಮೂವರು ಯುವಕರು ಸಾವನ್ನಪ್ಪಿದ್ದಾರೆ.

aurangabad
ಮಣ್ಣು ಕುಸಿದು ಮೂವರು ಯುವಕರ ದುರ್ಮರಣ

By

Published : Nov 15, 2020, 10:30 AM IST

Updated : Nov 15, 2020, 12:10 PM IST

ಔರಂಗಾಬಾದ್(ಬಿಹಾರ): ಮೈಮೇಲೆ ಮಣ್ಣು ಕುಸಿದ ಪರಿಣಾಮ ಜಿಲ್ಲೆಯ ಮಹುವನ್ ಗ್ರಾಮದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ.

ಮೂವರು ಯುವಕರು ಮಣ್ಣಿನ ಗುಂಡಿಯಲ್ಲಿ ಕುಳಿತು ಜೂಜಾಟ ಆಡುತ್ತಿದ್ದ ವೇಳೆ ಅವರ ಮೇಲೆ ಮಣ್ಣು ಕುಸಿದು ಮೂವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.

ದೀಪಾವಳಿಯ ಸಂದರ್ಭದಲ್ಲಿ ಜನರು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುತ್ತಿದ್ದರೆ ಈ ಯುವಕರು ಮಾತ್ರ ಜೂಜಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಬದಮ್ ಒಪಿ ಪೊಲೀಸ್ ಠಾಣೆ ಪ್ರದೇಶದ ಮಹುವನ್ ಗ್ರಾಮದ ಅಜಯ್ ಪಾಸ್ವಾನ್ (19), ಅನಿಲ್ ಸಿಂಗ್ ಎಂಬುವರ ಮಗ 22 ವರ್ಷದ ಮಗ ಗೋಪಾಲ್ ಸಿಂಗ್ ಮತ್ತು ಕುತುಂಬಾ ಪೊಲೀಸ್ ಠಾಣೆ ಪ್ರದೇಶದ ನ್ಯೂರಾ ಗ್ರಾಮದ ಮನೋಜ್ ಪಾಸ್ವಾನ್ ಅವರ ಮಗ ಗೋಲ್ಡನ್ ಪಾಸ್ವಾನ್(20) ಎಂದು ಗುರುತಿಸಲಾಗಿದೆ.

ಬದಮ್ ಒಪಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ತಲುಪಿ ಮೂವರು ಯುವಕರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರವೇ ಮೃತದೇಹಗಳನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Nov 15, 2020, 12:10 PM IST

ABOUT THE AUTHOR

...view details