ಕರ್ನಾಟಕ

karnataka

ETV Bharat / bharat

ಕೊಳವೆ ಬಾವಿಗೆ ಬಿದ್ದ 3 ವರ್ಷದ ಮಗು... ಬೋರ್​ವೆಲ್ ತೆಗೆದ ಅರ್ಧ ಗಂಟೆಯಲ್ಲೇ ದುರ್ಘಟನೆ! - ಕೊಳವೆ ಬಾವಿಗೆ ಬಿದ್ದ ಮಗು

ಮೂರು ವರ್ಷದ ಮಗುವೊಂದು ಕೊಳವೆ ಬಾವಿಗೆ ಬಿದ್ದ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದ್ದು, ಕೊಳವೆ ಬಾವಿ ಕೊರೆದ ಅರ್ಧ ಗಂಟೆಯಲ್ಲೇ ಈ ದುರ್ಘಟನೆ ಸಂಭವಿಸಿದೆ.

3 Year Old child Fell in Bore Well
ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಮಗು

By

Published : May 27, 2020, 8:23 PM IST

ಮೇದಕ್(ತೆಲಂಗಾಣ): ಮೂರು ವರ್ಷದ ಮಗುವೊಂದು ಕೊಳವೆ ಬಾವಿಗೆ ಬಿದ್ದಿರುವ ಘಟನೆ ಮೇದಕ್ ಜಿಲ್ಲೆಯ ಪಾಪಣ್ಣಪೇಟೆ ಮಂಡಲದ ಪೊಡಚನಪಲ್ಲಿ ಗ್ರಾಮದಲ್ಲಿ ನಡೆದಿದೆ.

ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಮಗು

ಕೊಳವೆ ಬಾವಿಯನ್ನು ಕೊರೆದ ಅರ್ಧ ಗಂಟೆಯಲ್ಲೇ ಸಾಯಿ ವರ್ಧನ್​ ಎಂಬ ಮಗು ಬೋರ್​ವೆಲ್ ಒಳಗೆ ಬಿದ್ದಿದೆ. ಕೃಷಿ ಕಾರ್ಯಕ್ಕಾಗಿ ಇಂದು ಹೊಸದಾಗಿ ಬೋರ್​ವೆಲ್ ತೋಡಿಸಲಾಗಿತ್ತು.

ಕೊಳವೆಬಾವಿ ಕೊರೆಸಿದ ನಂತರ ಅದನ್ನು ಮುಚ್ಚಿರಲಿಲ್ಲ. ಪೋಷಕರು ಬೇರೆ ಕೆಲಸಲ್ಲಿ ತೊಡಗಿಕೊಂಡಿದ್ದಾಗ, ಬಾಲಕ ಕೊಳವೆ ಬಾವಿಯೊಳಗೆ ಬಿದ್ದಿದ್ದಾನೆ. ಘಟನಾ ಸ್ಥಳಕ್ಕೆ ಕಂದಾಯ ಅಭಿವೃದ್ಧಿ ಅಧಿಕಾರಿ ಸಾಯಿರಾಂ ಮತ್ತು ಪಾಪಣ್ಣಪೇಟೆ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ABOUT THE AUTHOR

...view details