ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಲಷ್ಕರಿ-ಇ-ತೊಯ್ಬಾ ಉಗ್ರ ಸಂಘಟನೆ ಪುನಶ್ಚೇತನ ಮಾಡುವ ಉದ್ದೇಶದಿಂದ ಐಎಸ್ಐ ಸಂಘಟನೆ ಜತೆ ನಂಟು ಹೊಂದಿದ್ದ ಮೂವರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಐಎಸ್ಐ ಉಗ್ರ ಸಂಘಟನೆ ಜತೆ ನಂಟು... ಮೂವರು ಉಗ್ರರ ಬಂಧನ - ಉಗ್ರರು
ಉಗ್ರ ಸಂಘಟನೆ ಜತೆ ನಿಕಟ ಸಂಪರ್ಕ ಹೊಂದಿದ್ದ ಮೂವರು ಉಗ್ರರ ಬಂಧನ ಮಾಡುವಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದಾರೆ.
![ಐಎಸ್ಐ ಉಗ್ರ ಸಂಘಟನೆ ಜತೆ ನಂಟು... ಮೂವರು ಉಗ್ರರ ಬಂಧನ 3 terrorists arrested in Jammu & Kashmir](https://etvbharatimages.akamaized.net/etvbharat/prod-images/768-512-8628240-thumbnail-3x2-wdfdfddf.jpg)
ಐಎಸ್ಐನ ಮೊಹಮ್ಮದ್ ಕಾಶೀಮ್ ಜತೆ ಈ ಮೂವರು ನಿಕಟ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ. ಇದೀಗ ಇವರ ಬಂಧನ ಮಾಡಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಎಸ್ಎಸ್ಪಿ ರಶ್ಮಿ ವಾಜೀರ್ ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆ, ಉಗ್ರರು ಒಳನುಸುಳುವಿಕೆ ಸಹಾಯ ಹಾಗೂ ಭಯೋತ್ಪಾದನೆ ದಾಳಿ ನಡೆಸಲು ಇವರ ಸಹಾಯ ಪಡೆದುಕೊಳ್ಳಲು ಉಗ್ರ ಸಂಘಟನೆ ಮುಂದಾಗಿತ್ತು ಎನ್ನಲಾಗಿದೆ. ಒಟ್ಟು 11 ಮಂದಿಯ ಮೇಲೆ ಅನುಮಾನ ವ್ಯಕ್ತವಾಗಿದೆ ಎಂದು ತಿಳಿಸಿರುವ ಪೊಲೀಸ್ ಅಧಿಕಾರಿ ಬಂಧಿತರಲ್ಲಿ ಓರ್ವ ಮಹಿಳೆ ಕೂಡ ಸೇರಿದ್ದು, ಇವರ ಖಾತೆಗಳಿಗೆ ಹಣ ಕೂಡ ವರ್ಗಾವಣೆಯಾಗಿದೆ ಎಂದು ತಿಳಿಸಿದ್ದಾರೆ.