ಗುವಾಹಟಿ: ತಿನ್ಸುಕಿಯಾದಲ್ಲಿರುವ ಬೇಘ್ಜನ್ ನ ಆಯಿಲ್ ಇಂಡಿಯಾ ಲಿಮಿಟೆಡ್ನ ತೈಲಬಾವಿಯಲ್ಲಿ ಹೊತ್ತಿಕೊಂಡ ಬೆಂಕಿಯನ್ನ ನಿಯಂತ್ರಣಕ್ಕೆ ತರಲು ಸಿಬ್ಬಂದಿ ಹರ ಸಾಹಸ ಮಾಡುತ್ತಿದ್ದಾರೆ.
ಹೊತ್ತಿ ಉರಿಯುತ್ತಲೇ ಇದೆ ತೈಲಬಾವಿ, ಅಗ್ನಿಶಾಮಕ ಸಿಬ್ಬಂದಿ ಸಾವು: ಅಮೆರಿಕದಿಂದ ಬಂದ ಎಕ್ಸ್ಪರ್ಟ್ಸ್! - ಅಸ್ಸೋಂನಲ್ಲಿ ಹೊತ್ತಿ ಉರಿಯುತ್ತಿದೆ ತೈಲಬಾವಿ
ಅಸ್ಸೋಂ ರಾಜ್ಯದ ತಿನ್ಸುಕಿಯಾದಲ್ಲಿ ತೈಲಬಾವಿಯೊಂದು ಹೊತ್ತಿ ಉರಿಯುತ್ತಿದ್ದು, ಬೆಂಕಿ ನಂದಿಸಲು ಹೋಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಅಮೆರಿಕ ಮತ್ತು ಕೆನಾಡದಿಂದ ನುರಿತ ತಜ್ಞರು ಆಗಮಿಸಿದ್ದಾರೆ.
ಹೊತ್ತಿ ಉರಿಯುತ್ತಿದೆ ತೈಲಬಾವಿ
ಬೆಂಕಿಯ ಕೆನ್ನಾಲಿಗೆ ತಹಬದಿಗೆ ತರಲು ಅಮೆರಿಕ ಹಾಗೂ ಕೆನಡಾದಿಂದ ನುರಿತ ತಜ್ಞರನ್ನ ಕರೆಯಿಸಿಕೊಳ್ಳಲಾಗಿದೆ. ಅಮೆರಿಕದಿಂದ ಬಂದಿರುವ ಎಕ್ಸ್ಪರ್ಟ್ಗಳು ನಿನ್ನೆಯೇ ಅಸ್ಸೋಂ ತಲುಪಿದ್ದಾರೆ.
ತೈಲಬಾವಿಯ ಬೆಂಕಿಗೆ ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಬಲಿಯಾಗಿದ್ದಾರೆ. ಈ ನಡುವೆ ತೈಲಬಾವಿಯ ಸುತ್ತಮುತ್ತಲ 1.5 ಕಿಮಿ ವ್ಯಾಪ್ತಿಯನ್ನ ರೆಡ್ ಝೋನ್ ಎಂದು ಘೋಷಿಸಲಾಗಿದೆ. ಸಾರ್ವಜನಿಕರಿಗೆ ಅಪಾಯ ಆಗದಂತೆ ಕ್ರಮಕೈಗೊಳ್ಳಲಾಗಿದೆ.