ಮುಂಬೈ: ಮುಂಬೈನ ಮಾಢ ಜೆಟ್ಟಿ ಬಳಿ ದೋಣಿ ಮುಳುಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕಣ್ಮರೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮಧ್ಯರಾತ್ರಿ 1.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಮುಂಬೈ ಬಳಿ ದೋಣಿ ಮುಳುಗಿ ಮೂವರು ಕಣ್ಮರೆ - ಮಾಢ ಜೆಟ್ಟಿ
ಏಳು ಜನ ಪ್ರಯಾಣಿಸುತ್ತಿದ್ದ ದೋಣಿ ಮುಳುಗಿದ್ದರಿಂದ ಮೂವರು ಕಣ್ಮರೆಯಾಗಿರುವ ಘಟನೆ ಮುಂಬೈ ಕಡಲ ತೀರದ ಬಳಿ ನಡೆದಿದೆ. ಮಧ್ಯರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ.
3 missing as boat capsizes off Mumbai coast
ದೋಣಿಯಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದರು. ಮುಳುಗುತ್ತಿದ್ದ ದೋಣಿಯಿಂದ ತುರ್ತು ಸಂದೇಶ ಬಂದ ಹಿನ್ನೆಲೆಯಲ್ಲಿ ಕಡಲ ಕಾವಲು ಪಡೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ನಾಲ್ವರನ್ನು ರಕ್ಷಿಸಿದ್ದಾರೆ. ಇನ್ನೂ ಮೂವರು ಕಣ್ಮರೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ದೋಣಿ ಯಾರಿಗೆ ಸೇರಿದ್ದು ಹಾಗೂ ದೋಣಿಯಲ್ಲಿದ್ದವರು ಮೀನುಗಾರರೇ ಎಂಬ ಮಾಹಿತಿ ತಿಳಿದು ಬಂದಿಲ್ಲ. ಲಾಕ್ಡೌನ್ ಇರುವಾಗ ದೋಣಿ ನೀರಲ್ಲಿದ್ದಿದ್ದು ಏಕೆ ಎಂಬುದರ ತನಿಖೆ ಸಹ ನಡೆಯುತ್ತಿದೆ.