ಶ್ರೀನಗರ:ಜಮ್ಮು-ಶ್ರೀನಗರ ಹೆದ್ದಾರಿ ಬಳಿ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಹತರಾಗಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮೂವರು ಭಯೋತ್ಪಾದಕರು ಮೂರನೆ ವ್ಯಕ್ತಿಯ ಸಹಾಯದಿಂದ ನಾಗ್ರೋಟಾದ ಸುತ್ತಮುತ್ತ ಐಇಡಿ ಬಾಂಬ್ ದಾಳಿಗೆ ಸಿದ್ಧತೆ ನಡೆಸಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಉಗ್ರರು ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳ ವಶ: ವಿಫಲವಾಯ್ತು ಭಯೋತ್ಪಾದಕರ ಭಾರಿ ಸ್ಕೆಚ್! - ಹತ್ಯೆಯಾದವರು ಹಾಕಿದ್ರು ದೊಡ್ಡ ಸ್ಕೆಚ್
ಶುಕ್ರವಾರ ಮುಂಜಾನೆ ಹತ್ಯೆಯಾಗಿದ್ದ ಮೂವರು ಉಗ್ರರು ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂವರು ಭಯೋತ್ಪಾದಕರ ಹತ್ಯೆಯಿಂದ ಚೇತರಿಸಿಕೊಳ್ಳಲಾಗಿದೆ. ಇವರು ಕೆಲವೇ ದಿನಗಳಲ್ಲಿ ಮೂರನೇ ವ್ಯಕ್ತಿಯ ಮೂಲಕ ನಾಗ್ರೋಟಾದ ಸುತ್ತಲೂ ಐಇಡಿ ಬಳಸಲು ಸಿದ್ಧರಾಗಿದ್ದರು. ಉಗ್ರರು ಶಸ್ತ್ರಾಸ್ತ್ರಗಳನ್ನು ಜಮ್ಮು-ಶ್ರೀನಗರ ಹೆದ್ದಾರಿ ಬಳಿ ಅನುಕೂಲಕರ ಸ್ಥಳದಲ್ಲಿ ಅಡಗಿಸಿಟ್ಟಿದ್ದರು. ಇದೀಗ ಆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಅಪಾರ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸಂವಹನ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಕೆ ರೈಫಲ್‌ಗಳು, ಪಿಸ್ತೂಲ್‌ಗಳು ಮತ್ತು ಶಸ್ತ್ರಸಜ್ಜಿತ ಸ್ಟೀಲ್ ಕೋರ್ ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದು, ಇದು ಲೆವೆಲ್ 3 ಪ್ರೊಟೆಕ್ಷನ್ ಬುಲೆಟ್ ಪ್ರೂಫ್ ವಾಹನಗಳ ಮೂಲಕವೂ ಹಾದು ಹೋಗುವ ಸಾಮರ್ಥ್ಯ ಹೊಂದಿವೆ ಎಂದು ತಿಳಿದುಬಂದಿದೆ.