ಕರ್ನಾಟಕ

karnataka

ETV Bharat / bharat

ಡ್ರಗ್ಸ್​ ಮಾರಾಟ : ಇಬ್ಬರು ವಿದೇಶಿಯರು ಸೇರಿ ಮೂವರ ಬಂಧನ - ಅಮಧ್ರ ಪ್ರದೇಶದ ವಿಜಯವಾಡ

ಖಚಿತ ಮಾಹಿತಿ ಮೇರೆಗೆ ವಿಜಯವಾಡ ಪೊಲೀಸರು ಕಾರ್ಯಾಚರಣೆ ನಡೆಸಿ, ಪೆನಮಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.

Vijayawada
ಡ್ರಗ್ಸ್​ ಮಾರಾಟ

By

Published : Jul 11, 2020, 7:51 AM IST

ವಿಜಯವಾಡ : ಡ್ರಗ್ಸ್ ಮತ್ತು ಗಾಂಜಾ ಮಾರಾಟ ಮಾಡಿದ ಆರೋಪದ ಮೇಲೆ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುಡಾನ್ ಮೂಲದ ಮೊಹಮ್ಮದ್ ಗಹೇಲ್ ರಸೂಲ್ (25), ತಾಂಜೇನಿಯಾ ಮೂಲದ ಯೋನಾ ಲಿಶ್ವಾ ಶಬಾನಿ (26) ಮತ್ತು ದೆಹಲಿ ಮೂಲದ ಕೊನೆರು ಅರ್ಜುನ್ ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ವಿಜಯವಾಡ ಪೊಲೀಸರು ಕಾರ್ಯಾಚರಣೆ ನಡೆಸಿ, ಪೆನಮಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.

ಬಂಧಿತರ ಬಳಿ ಇದ್ದ 17 ಗ್ರಾಂ ಮೆಥಿಲೀನ್ ಡಯಾಕ್ಸಿ ಮೆಥಾಂಫೆಟಮೈನ್ (ಎಂಡಿಎಂಎ), 150 ಗ್ರಾಂ ಗಾಂಜಾ, ಕೆಲವು ಬಿಟ್‌ಕಾಯಿನ್‌ಗಳು, ಹುಕ್ಕಾ ಉಪಕರಣ ಮತ್ತು 3 ಸೆಲ್ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದೆಹಲಿ ಅರ್ಜುನ್ ಕಳೆದ 4 ವರ್ಷಗಳಿಂದ ವಿಜಯವಾಡದಲ್ಲಿ ವಾಸಿಸುತ್ತಿದ್ದು, ಅಂದಿನಿಂದ ಅವರು ಗಾಂಜಾ ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿದ್ದಾನೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ರಸೂಲ್ ಮತ್ತು ಶಬಾನಿಯಿಂದ ಅರ್ಜುನ್​ ಡ್ರಗ್ಸ್ ಖರೀದಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಇಬ್ಬರು ವಿದೇಶಿಯರು ಬೆಂಗಳೂರಿನಿಂದ ಡ್ರಗ್ಸ್ ತಂದು ವಿಜಯವಾಡದಲ್ಲಿ ಮಾರಾಟ ಮಾಡುತ್ತಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ABOUT THE AUTHOR

...view details