ಕೋಲ್ಕತಾ:ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಜ್‌ಪುರ ಜಿಲ್ಲೆಯ ಕುಮಾರ್‌ಗಂಜ್‌ನಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಬಾಲಕಿಯ ಪ್ರೇಮಿಯೂ ಸೇರಿದ್ದು, ಸೋಮವಾರ ಬಾಲಕಿ ಮೃತ ದೇಶವನ್ನ ಪತ್ತೆ ಮಾಡಲಾಗಿತ್ತು. ಬಾಲಕಿ ಬಟ್ಟೆ ಖರೀದಿಸಬೇಕೆಂದು ಮನೆಯಲ್ಲಿ ಹೇಳಿ ಹೋಗಿದ್ದರು ಎನ್ನಲಾಗಿದೆ. ಆರೋಪಿ ಮಹಬೂಬುರ್ ಮಿಯಾನ್ ಎಂಬುವವನ ಜತೆ ಬಾಲಕಿ ಸಲುಗೆಯಿಂದ ಇದ್ದಳು ಎಂಬ ಮಾಹಿತಿಯೂ ಇದೆ. ಇದೇ ಪರಿಚಯದ ಸಲುಗೆಯಿಂದ ಸ್ನೇಹಿತ ಮಹಬೂಬುರ್ ವಿಯಾನ್, ಬಾಲಕಿಯನ್ನ ಭಾನುವಾರ ಬೆಲ್ಖೋರ್ ಪ್ರದೇಶದ ನಿರ್ಜನ ಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ವಿಯಾನ್ ಜತೆ ಪಂಕಜ್ ಬರ್ಮನ್ ಮತ್ತು ಗೌತಮ್ ಬರ್ಮನ್ ಕೂಡ ಅವರೊಂದಿಗೆ ತೆರಳಿದ್ದರು. ನಂತರ ಮೂವರು ಸೇರಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.