ಚಂಡೀಗಢ(ಪಂಜಾಬ್):ಇಲ್ಲಿನ ಪಿಜಿವೊಂದರಲ್ಲಿ ಏಕಾಏಕಿಯಾಗಿ ಬೆಂಕಿ ಹತ್ತಿ ಧಗಧಗನೇ ಹೊತ್ತಿ ಉರಿದಿರುವ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿ, ಕೆಲ ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಏಕಾಏಕಿ ಹೊತ್ತಿ ಉರಿದ ಪಿಜಿ, ಮೂವರು ಮಹಿಳೆಯರ ಸಾವು, ಅನೇಕರ ಸ್ಥಿತಿ ಚಿಂತಾಜನಕ! - ಮೂವರು ಮಹಿಳೆಯರು ಸಾವು
ಪೇಯಿಂಗ್ ಗೆಸ್ಟ್ (ಪಿಜಿ) ಕಟ್ಟಡವೊಂದಕ್ಕೆ ಏಕಾಏಕಿ ಬೆಂಕಿ ಹತ್ತಿಕೊಂಡಿರುವ ಪರಿಣಾಮ ಅದರಲ್ಲಿ ವಾಸವಾಗಿದ್ದ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ನಡೆದಿದೆ.
3 girls died in A fire broke out in a hostel in Sector 32 chandigarh
ಸೆಕ್ಟರ್ - 32ರಲ್ಲಿನ ಪಿಜಿ ನಂಬರ್ 3,325ರಲ್ಲಿ ಈ ದುರ್ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡಿದ್ದು, ಗೊತ್ತಾಗುತ್ತಿದ್ದಂತೆ ಕೆಲ ಮಹಿಳೆಯರು ಅಲ್ಲಿಂದ ಕಾಲು ಕಿತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವ ಕೆಲ ಮಹಿಳೆಯರನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾವ ಕಾರಣಕ್ಕಾಗಿ ಬೆಂಕಿ ಹೊತ್ತಿಕೊಂಡಿದೆ ಎಂಬುದರ ಕುರಿತು ಇಲ್ಲಿಯವರೆಗೆ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.