ಆಗ್ರಾ(ಉತ್ತರ ಪ್ರದೇಶ):ದೇಶಾದ್ಯಂತ ಮಾದಕ ವಸ್ತು ಜಾಲ ಪತ್ತೆ ಕಾರ್ಯಾಚರಣೆ ತೀವ್ರಗೊಂಡಿದ್ದು, ವಿವಿಧ ರಾಜ್ಯಗಳಲ್ಲಿ ಡ್ರಗ್ಸ್ ಪೆಡ್ಲರ್ಬಳ ಬಂಧನ ಮಾಡಲಾಗುತ್ತಿದೆ. ಇದೀಗ ಉತ್ತರ ಪ್ರದೇಶಧ ಆಗ್ರಾದಲ್ಲೂ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮೂವರು ಪೆಡ್ಲರ್ಗಳ ಬಂಧನ ಮಾಡಲಾಗಿದೆ.
ಮೂವರು ಡ್ರಗ್ಸ್ ಪೆಡ್ಲರ್ ಬಂಧನ, ಬರೋಬ್ಬರಿ 500 ಕೆಜಿ ಗಾಂಜಾ ವಶ! - 500 ಕೆಜಿ ಗಾಂಜಾ ವಶ
ಮೂವರು ಡ್ರಗ್ಸ್ ಪೆಡ್ಲರ್ಗಳ ಬಂಧನ ಮಾಡಿ ಬರೋಬ್ಬರಿ 500 ಕೆಜಿ ಗಾಂಜಾ ವಶ ಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗ್ರಾ ಪೊಲೀಸ್ ಹಾಗೂ ಎಸ್ಟಿಎಫ್ ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಡ್ರಗ್ಸ್ ಪೆಡ್ಲರ್ಗಳ ಬಂಧನ ಮಾಡಲಾಗಿದ್ದು, 500 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಟ್ಯಾಂಕರ್ನಲ್ಲಿ ಸಿಕಂದರಾಬಾದ್ ಮೂಲಕ ತೆಗೆದುಕೊಂಡು ಹೋಗಲಾಗುತ್ತಿದೆ ಎಂಬ ಸುದ್ದಿ ಪೊಲೀಸರಿಗೆ ಸಿಕ್ಕಿತ್ತು.
ಒಡಿಶಾದಿಂದ ಗಾಂಜಾ ತೆಗೆದುಕೊಂಡು ಬಂದು ಉತ್ತರಪ್ರದೇಶದ ಮಥುರಾಕ್ಕೆ ಕೊಂಡೊಯ್ಯಲಾಗುತ್ತಿತ್ತು ಎಂದು ಬಂಧಿತರು ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ಕೂಡ ಪೊಲೀಸರು ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.