ನಾಗೌರ್(ರಾಜಸ್ಥಾನ):ಜಿಲ್ಲೆಯ ಖಿವಾನ್ಸರ್ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಲಾ ಕಾಂಟಿಯಾ ರಸ್ತೆಯಲ್ಲಿ ಎರಡು ಬೈಕ್ಗಳ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ : ಮೂವರು ದುರ್ಮರಣ, ಇಬ್ಬರ ಸ್ಥಿತಿ ಗಂಭೀರ - ಅಪಘಾತದಲ್ಲಿ ಮೃತ
ಎರಡು ಬೈಕ್ಗಳು ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜಸ್ಥಾನದಲ್ಲಿ ಈ ದುರ್ಘಟನೆ ಸಂಭವಿಸಿದೆ.
accident
ಗಾಯಾಳುಗಳನ್ನು ಚಿಕಿತ್ಸೆಗಾಗಿ ಖಿವಾನ್ಸರ್ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಖಿವಾನ್ಸಾರ್ ಪೊಲೀಸ್ ಠಾಣಾ ಸಿಬ್ಬಂದಿ ಸಮುದಾಯ ಆರೋಗ್ಯ ಕೇಂದ್ರದಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದು, ಠಾಣಾ ಉಸ್ತುವಾರಿ ಬ್ರಿಜೇಂದ್ರ ಸಿಂಗ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರು ಕಾಂಟಿಯಾ ಗ್ರಾಮದ ನಿವಾಸಿಗಳಾದ ಅಸುರಾಂ ನಾಯಕ್, ಕೈಲಾಶ್ ನಾಯಕ್ ಮತ್ತು ಶ್ರವಣ್ ಮೇಘವಾಲ್ ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಗಾಯೇಶ್ ನಾಯಕ್ ಮತ್ತು ಗುಲಾಬ್ ನಾಯಕ್ ಕೂಡಾ ಕಾಂಟಿಯಾ ಗ್ರಾಮದವರಾಗಿದ್ದಾರೆ.