ರೋಹ್ತಾಸ್ (ಬಿಹಾರ): ಇಲ್ಲಿನ ಅಕೋಡಿ ಗ್ರಾಮದಲ್ಲಿ ಎರಡು ಅಂತಸ್ತಿನ ಮನೆ ಇದ್ದಕ್ಕಿದ್ದಂತೆ ಕುಸಿದಿದೆ. ದುರ್ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎರಡು ಅಂತಸ್ತಿನ ಮನೆ ಕುಸಿತ: ಮೂವರ ಸಾವು, 7 ಜನರಿಗೆ ಗಾಯ - ಬಿಹಾರದಲ್ಲಿ ಮನೆ ಕುಸಿತ
ಮನೆ ಕುಸಿತದ ದುರ್ಘಟನೆಯೊಂದರಲ್ಲಿ ಮೂವರು ಮೃತಪಟ್ಟಿದ್ದು, 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರೂ ಒಂದೇ ಕುಂಟುಂಬದವರಾಗಿದ್ದಾರೆ.
building-collapse
ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಎಲ್ಲರನ್ನೂ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಮೃತಪಟ್ಟವರಲ್ಲಿ ಒಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ. ಎಲ್ಲರೂ ಒಂದೇ ಕುಂಟುಂಬಕ್ಕೆ ಸೇರಿದವರಾಗಿದ್ದಾರೆ.