ಗೊಡ್ಡಾ (ಜಾರ್ಖಂಡ್):ಧಾರ್ಮಿಕ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವೊಲಿಸಲು ಯತ್ನಿಸುವಾಗ ಜನರ ಗುಂಪು ನಡೆಸಿದ ದಾಳಿಗೆ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಧಾರ್ಮಿಕ ಸ್ಥಳದಲ್ಲಿ ಅಂತರ ಕಾಪಾಡಿ ಎಂದಿದ್ದಕ್ಕೆ ಪೊಲೀಸರ ಮೇಲೇ ಕಲ್ಲು ತೂರಾಟ... ಐವರ ಬಂಧನ - ಧಾರ್ಮಿಕ ಸ್ಥಳದಲ್ಲಿ ಅಂತರ ಕಾಪಾಡಿ ಎಂದಿದ್ದಕ್ಕೆ ಕಲ್ಲು ತೂರಾಟ
ಸಾಮಾಜಿಕ ಅಂತರ ನಿಯಮ ಪಾಲಿಸಿ ಎಂದು ತಿಳಿ ಹೇಳುತ್ತಿದ್ದ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದ ಐವರು ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಠಾಕೂರ್ಗಂಗ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರಾವ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಐದು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾಗಾಮ ಬ್ಲಾಕ್‌ನ ಮಾರಾವ್ ಗ್ರಾಮದ ಧಾರ್ಮಿಕ ಸ್ಥಳವೊಂದರ ಬಳಿ ಕೆಲವರು ಜಮಾಯಿಸಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಸಾಮಾಜಿಕ ಅಂತರವನ್ನು ಅನುಸರಿಸುವಂತೆ ಕೇಳಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಪ್ರಸಾದ್ ಬಾರ್ನ್ವಾಲ್ ತಿಳಿಸಿದ್ದಾರೆ.
ಜನರ ಗುಂಪು ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಗಸ್ತು ವಾಹನಕ್ಕೂ ಹಾನಿಯಾಗಿದೆ. ಈ ಸಂಬಂಧ 60 ಜನೆ ಮೇಲೆ ಎಫ್ಐಆರ್ ದಾಖಲು ಮಾಡಿದ್ದು, ಐವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.