ನವದೆಹಲಿ: ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರುವ ಕೆಲಸ ನಡೆಯುತ್ತಿದ್ದು, ಎರಡನೇ ಹಂತದ ಕಾರ್ಯಾಚರಣೆ ಮೇ 16ರಿಂದ 22ರವರೆಗೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮೇ.16ರಿಂದ 'ವಂದೇ ಭಾರತ್ ಮಿಷನ್' 2ನೇ ಹಂತ: 31 ದೇಶಗಳಿಂದ ಬರಲಿದ್ದಾರೆ ಭಾರತೀಯರು - ವಂದೇ ಭಾರತ್ ಮಿಷನ್
ಬೇರೆ ಬೇರೆ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಷನ್ 2ನೇ ಹಂತ ಮೇ 16ರಿಂದ ಆರಂಭಗೊಳ್ಳಲಿದೆ.
ಎರಡನೇ ಹಂತದ ಕಾರ್ಯಾಚರಣೆಯಲ್ಲಿ 149 ವಿಮಾನಗಳು 31 ದೇಶಗಳಿಂದ ಭಾರತೀಯರನ್ನು ಹೊತ್ತು ತರಲಿವೆ. ಪ್ರಪಂಚದಾದ್ಯಂತ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ವಿದೇಶದಲ್ಲೂ ಲಾಕ್ಡೌನ್ ಜಾರಿಯಲ್ಲಿದೆ. ಈ ನಡುವೆ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ವಂದೇ ಭಾರತ್ ಮಿಷನ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ಅಮೆರಿಕ,ಯುಎಇ, ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಂದ ಭಾರತೀಯರನ್ನು ಕರೆತರಲಾಗುತ್ತಿದ್ದು, ಸಾವಿರಾರು ಭಾರತೀಯರು ಈಗಾಗಲೇ ತವರಿಗೆ ಮರಳಿದ್ದಾರೆ.
ಎರಡನೇ ಹಂತದಲ್ಲಿ ರಷ್ಯಾ, ಜರ್ಮನಿ, ಥಾಯ್ಲೆಂಡ್, ಫ್ರಾನ್ಸ್, ಸ್ಪೇನ್, ಉಜ್ಬೇಕಿಸ್ತಾನ, ಖಜಕಿಸ್ತಾನ ಸೇರಿದಂತೆ 31 ದೇಶಗಳಿಂದ ಭಾರತೀಯರನ್ನು ಕರೆತರಲು ಭಾರತ ಮುಂದಾಗಿದೆ.