ಕರ್ನಾಟಕ

karnataka

ಕೇರಳದಲ್ಲಿ ಕೊರೊನ ವೈರಸ್​ 2 ನೇ ಪ್ರಕರಣ: ಆರೋಗ್ಯ ಸಚಿವೆ ಶೈಲಜಾ

By

Published : Feb 2, 2020, 7:35 PM IST

ಭಾರತದಲ್ಲಿ ಕೊರೊನ ವೈರಸ್‌ನ ಎರಡನೇ ಪ್ರಕರಣ ಮತ್ತೆ ಕೇರಳದಿಂದ ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಕೇರಳದಲ್ಲಿ ಕೊರೋನ ವೈರಸ್​ 2 ನೇ ಪ್ರಕರಣ , 2nd case of coronavirus in Kerala
ಆರೋಗ್ಯ ಸಚಿವೆ ಶೈಲಜಾ

ಕೊಲ್ಲಮ್ ​(ಕೇರಳ) : ಭಾರತದಲ್ಲಿ ಕೊರೊನ ವೈರಸ್‌ನ ಎರಡನೇ ಪ್ರಕರಣ ಮತ್ತೆ ಕೇರಳದಿಂದ ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಆಲಪ್ಪುಳ ವೈದ್ಯಕೀಯ ಕಾಲೇಜಿನ ಪ್ರತ್ಯೇಕ ವಾರ್ಡ್‌ನಲ್ಲಿ ರೋಗಿಯನ್ನು ದಾಖಲಿಸಲಾಗಿದೆ. ಪುಣೆ ವೈರಾಲಜಿ ಸಂಸ್ಥೆಯ ಫಲಿತಾಂಶಗಳಿಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ. ಇದು ಸಕಾರಾತ್ಮಕವಾಗಿರುವ ಸಾಧ್ಯತೆಗಳಿವೆ. ಆದರೆ ವರದಿಯನ್ನು ಪಡೆದ ನಂತರವೇ ನಾವು ಅದನ್ನು ದೃಢೀಕರಿಸಬಹುದು. ರೋಗಿಯು ಚೀನಾದ ಪ್ರವಾಸ ಕೈಗೊಂಡಿರುವ ಕುರಿತು ಮಾಹಿತಿ ಲಭಿಸಿದೆ ಎಂದು ಆರೋಗ್ಯ ಸಚಿವೆ ಶೈಲಜಾ ಹೇಳಿದರು.

ರೋಗಿಯು ಸ್ಥಿರವಾಗಿದೆ ಮತ್ತು ನಿಕಟವಾಗಿ ತಪಾಸಣೆ ಮಾಡಲಾಗುತ್ತಿದೆ. ಕೇರಳ ಸರ್ಕಾರವು ರಾಜ್ಯದಲ್ಲಿ ಕೊರೋನಾ ವೈರಸ್​ ಪ್ರಕರಣಗಳನ್ನು ಗುರುತಿಸಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

ವುಹಾನ್ ವಿಶ್ವವಿದ್ಯಾಲಯವು ಕೇರಳದ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದೆ. ಅಲ್ಲಿರುವ ವಿದ್ಯಾರ್ತೀಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.

ವರದಿಯನ್ನು ಇಂದೆಯೇ ನೀಡಬೇಕೆಂದು ನಾನು ಒತ್ತಾಯಿಸಿದ್ದೇನೆ. ಕರೋನವೈರಸ್ ಸೋಂಕಿಗೆ ಒಳಗಾದವರಿಗೆ ಚಿಕೆಇತ್ಸೆ ನೀಡಿ, ಅವರ ಜೀವ ಕಾಪಾಡುವುದು ನಮ್ಮ ಪ್ರಯತ್ನವಾಗಿದೆ ಎಂದು ತಿಳಿಸಿದರು.

ಮೂರು ದಿನಗಳ ಹಿಂದೆ ಮೊದಲ ಪ್ರಕರಣವೂ ಕೇರಳದಲ್ಲೇ ದಾಖಲಾಗಿತ್ತು. ಈ ವೈರಸ್ ಡಿಸೆಂಬರ್‌ನಲ್ಲಿ ವುಹಾನ್‌ನಲ್ಲಿ ಹುಟ್ಟಿಕೊಂಡಿತು ಮತ್ತು ಅಂದಿನಿಂದ ವಿಶ್ವದ ವಿವಿಧ ನಗರಗಳಿಗೆ ಹರಡಿತು.

ABOUT THE AUTHOR

...view details