ಕರ್ನಾಟಕ

karnataka

ETV Bharat / bharat

ಮಧ್ಯರಾತ್ರಿಯಿಂದ ಕಾಶ್ಮೀರದಲ್ಲಿ 2ಜಿ ಮೊಬೈಲ್​​ ಇಂಟರ್​ನೆಟ್​​​​ ಸೇವೆ ಪುನರಾರಂಭ - ಕಾಶ್ಮೀರದಲ್ಲಿ 2ಜಿ ಮೊಬೈಲ್ ಇಂಟರ್ನೆಟ್ ಪುನರಾರಂಭ

370ನೇ ವಿಧಿ ರದ್ಧತಿಯ ಬಳಿಕ ಕಣಿವೆ ರಾಜ್ಯದಲ್ಲಿ ಕಳೆದ ಐದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಇಂಟರ್​​ನೆಟ್​​​​ ಸೇವೆಯನ್ನು ಇದೀಗ ಮರುಸ್ಥಾಪಿಸಲಾಗಿದ್ದು, ಶುಕ್ರವಾರ ಮಧ್ಯರಾತ್ರಿಯಿಂದ ಕಾಶ್ಮೀರದಲ್ಲಿ 2ಜಿ ಮೊಬೈಲ್ ಇಂಟರ್​​ನೆಟ್​​ ಸೇವೆಯನ್ನು ಪುನರಾರಂಭಿಸಲಾಗಿದೆ.

2G mobile internet restored in Kashmir
ಕಾಶ್ಮೀರದಲ್ಲಿ 2ಜಿ ಮೊಬೈಲ್ ಇಂಟರ್ನೆಟ್ ಪುನರಾರಂಭ

By

Published : Jan 25, 2020, 9:28 AM IST

ಶ್ರೀನಗರ: ಶುಕ್ರವಾರ ಮಧ್ಯರಾತ್ರಿಯಿಂದ ಕಾಶ್ಮೀರದಲ್ಲಿ 2ಜಿ ಮೊಬೈಲ್ ಇಂಟರ್​ನೆಟ್​​ ಸೇವೆ ಮರುಸ್ಥಾಪಿಸಲಾಗಿದೆ. ಆದರೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಅನುಮೋದಿಸಿರುವ 301 ವೆಬ್‌ಸೈಟ್‌ಗಳನ್ನು ಬಳಸಲು ಮಾತ್ರ ಅನುಮತಿ ನೀಡಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.

370ನೇ ವಿಧಿ ರದ್ಧತಿಯ ಬಳಿಕ ಕಣಿವೆ ರಾಜ್ಯದಲ್ಲಿ ಕಳೆದ ಐದು ತಿಂಗಳಿನಿಂದ (ಆಗಸ್ಟ್​ 5) ಇಂಟರ್​​ನೆಟ್​​, ಮೊಬೈಲ್​, ಲ್ಯಾಂಡ್​ಲೈನ್​ ಸೇವೆಗಳು ಸ್ಥಗಿತಗೊಂಡಿದ್ದವು. ಕೇಂದ್ರಾಡಳಿತ ಪ್ರದೇಶದಲ್ಲಿ ನಿರ್ಬಂಧಗಳನ್ನು ಹೇರಿರುವ ಎಲ್ಲಾ ಆದೇಶಗಳನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್​ ಜ. 10ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಸೂಚಿಸಿತ್ತು. ಬಳಿಕ ಜಮ್ಮು ವಿಭಾಗದಲ್ಲಿ ಪ್ರೀ ಪೇಯ್ಡ್ ಮೊಬೈಲ್​ ಸೇವೆಗಳನ್ನು ಹಾಗೂ 2ಜಿ ಮೊಬೈಲ್ ಡಾಟಾ ಸೇವೆಗಳನ್ನು ಪುನರಾರಂಭಿಸಿದ ವಾರದೊಳಗಾಗಿ ಕಾಶ್ಮೀರ ಆಡಳಿತ ಈ ನಿರ್ಧಾರಕ್ಕೆ ಬಂದಿದೆ.

ಇಂದಿನಿಂದ ಕಾಶ್ಮೀರದಲ್ಲಿ ಪೋಸ್ಟ್​ ಪೇಯ್ಡ್​​ ಹಾಗೂ ಪ್ರೀ ಪೇಯ್ಡ್​ ಎರಡೂ ಸಿಮ್​ ಕಾರ್ಡ್​ಗಳಲ್ಲಿ ಡಾಟಾ ಸೇವೆ ಲಭ್ಯವಿದೆ. ಆದರೆ ಶ್ವೇತಪಟ್ಟಿಯ (ವೈಟ್​ಲಿಸ್ಟೆಡ್​) ಜಾಲತಾಣಗಳನ್ನು ಬಳಸಲು ಮಾತ್ರ ಅನುಮತಿ ನೀಡಲಾಗಿದೆ. ಅನುಮೋದನೆ ನೀಡಲಾಗಿರುವ ವೈಟ್​ಲಿಸ್ಟೆಡ್ ವೆಬ್​ಸೈಟ್​ಗಳು ಶಿಕ್ಷಣ, ಬ್ಯಾಂಕಿಂಗ್​​, ಸುದ್ದಿ, ಪ್ರಯಾಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಜಾಲತಾಣಗಳಾಗಿವೆ.

For All Latest Updates

TAGGED:

article 370

ABOUT THE AUTHOR

...view details