ಕರ್ನಾಟಕ

karnataka

ETV Bharat / bharat

ಫ್ಲ್ಯಾಟ್​​ನಲ್ಲಿ ನಿಗೂಢವಾಗಿ ಯುವತಿ ಮೃತದೇಹ ಪತ್ತೆ: ಶವ ಸಿಕ್ಕ ಜಾಗದಲ್ಲಿ ಮದ್ಯದ ಬಾಟಲಿ - ಪುಣೆಯ ಮಣಿಕ್​ಬಾಗ್​ ಪ್ರದೇಶ

ಮಹಾರಾಷ್ಟ್ರದ ಪುಣೆಯ ಫ್ಲ್ಯಾಟ್​ವೊಂದರಲ್ಲಿ ಯುವತಿ ನಿಗೂಢವಾಗಿ ಸಾವನ್ನಪ್ಪಿದ್ದು, ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

29 year-old woman found dead
ಫ್ಲ್ಯಾಟ್​​ನಲ್ಲಿ ನಿಗೂಢವಾಗಿ ಯುವತಿ ಮೃತದೇಹ

By

Published : Dec 3, 2019, 5:20 PM IST

ಪುಣೆ(ಮಹಾರಾಷ್ಟ್ರ):ಪುಣೆಯ ಮಣಿಕ್​ಬಾಗ್​ ಪ್ರದೇಶದಲ್ಲಿ 29 ವರ್ಷದ ಯುವತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾ ಗಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ಫ್ಲ್ಯಾಟ್​​ನಲ್ಲಿ ನಿಗೂಢವಾಗಿ ಯುವತಿ ಮೃತದೇಹ ಪತ್ತೆ

ಮೃತ ಯುವತಿ ತೇಜಸ್ ಪಾಲ್​​ ಬೀಡ್​​ ಜಿಲ್ಲೆಯ ನಿವಾಸಿಯಾಗಿದ್ದು, ಎಂಬಿಎ ಶಿಕ್ಷಣ ಮುಗಿಸಿ ಪುಣೆಯ ಫ್ಲ್ಯಾಟ್‌ನಲ್ಲಿ ತಾಯಿ ಹಾಗೂ ಸಹೋದರಿ ಜತೆ ವಾಸವಾಗಿದ್ದರು. ಈ ಮಧ್ಯೆ, ಬೀಡ್​ಗೆ ತೆರಳಿದ್ದ ತೇಜಸ್​ ಮೂರು ದಿನಗಳ ಹಿಂದೆ ಕೆಲಸ ಇದೆ ಎಂದು ಹೇಳಿ ಏಕಾಂಗಿಯಾಗಿ ಪುಣೆಗೆ ವಾಪಸ್​ ಆಗಿದ್ದರು. ಇದೀಗ ಆಕೆಯ ಮೃತದೇಹ ಪತ್ತೆಯಾಗಿದ್ದು ಅನುಮಾನಗಳಿಗೆ ಆಸ್ಪದವಾಗಿದೆ.

ಫ್ಲ್ಯಾಟ್​​ನಲ್ಲಿ ನಿಗೂಢವಾಗಿ ಯುವತಿ ಮೃತದೇಹ ಪತ್ತೆ

ಯುವತಿಯ​ ಮೃತದೇಹ ಪತ್ತೆಯಾದ ಕೋಣೆಯಲ್ಲಿ ಖಾಲಿ ಮದ್ಯದ ಬಾಟಲಿ ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನ್ನಾಗಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details