ಕರ್ನಾಟಕ

karnataka

ETV Bharat / bharat

ಮರ್ಕಜ್​ನಿಂದ ಹಿಂದಿರುಗಿ ಗುಪ್ತವಾಗಿ ವಾಸಿಸುತ್ತಿದ್ದ 29 ತಬ್ಲಿಘಿಗಳು ಅರೆಸ್ಟ್​ - ತಬ್ಲಿಘಿಗಳು ಅರೆಸ್ಟ್​

ದೆಹಲಿಯ ಮರ್ಕಜ್​ನಿಂದ ಹಿಂದಿರುಗಿ ಬಂದು ಅಹಮದ್ ​ನಗರದಲ್ಲಿ ಗುಪ್ತವಾಗಿ ವಾಸಿಸುತ್ತಿದ್ದ 29 ಮಂದಿ ತಬ್ಲಿಘಿಗಳನ್ನು ಬಂಧಿಸಲಾಗಿದೆ.

29 Tablighi's produced before district court in Maharashtra
ತಬ್ಲಿಘಿಗಳು ಅರೆಸ್ಟ್​

By

Published : Apr 18, 2020, 4:14 PM IST

ಮುಂಬೈ(ಮಹಾರಾಷ್ಟ್ರ): 29 ಮಂದಿ ತಬ್ಲಿಘಿಗಳನ್ನು ಮಹಾರಾಷ್ಟ್ರದ ಅಹಮದ್​ನಗರ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ಅವರನ್ನು ಜಿಲ್ಲಾ ಕೋರ್ಟ್​ ಮುಂದೆ ಹಾಜರುಪಡಿಸಲಾಗಿದೆ.

29ರ ಪೈಕಿ ಘಾನಾ, ಇಂಡೋನೇಷ್ಯಾ, ಬ್ರೂನಿ ಮತ್ತು ಐವೇರಿಯಾ ದೇಶದಿಂದ ಬಂದಿದ್ದ 24 ಮಂದಿ ವಿದೇಶಿಗರು ಹಾಗೂ ಐದು ಮಂದಿ ಭಾರತೀಯರಿದ್ದಾರೆ.

ದೆಹಲಿಯ ಮರ್ಕಜ್​ನಿಂದ ಹಿಂದಿರುಗಿ ಬಂದಿದ್ದ ಈ ತಬ್ಲಿಘಿಗಳು ಅಹಮದ್​ನಗರದಲ್ಲಿ ಗುಪ್ತವಾಗಿ ವಾಸಿಸುತ್ತಿದ್ದರು. ಅಲ್ಲದೇ ಇವರಲ್ಲಿ ಐದು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗುತ್ತಿದ್ದಂತೆಯೇ ಈ ಐವರು ಸೇರಿದಂತೆ 29 ತಬ್ಲಿಘಿಗಳನ್ನು ಬಂಧಿಸಲಾಗಿದೆ.

ABOUT THE AUTHOR

...view details