ಕರ್ನಾಟಕ

karnataka

ETV Bharat / bharat

ತಿಂಗಳ ಕಡೆಯ ದಿನವಾದ ಇಂದು ನಿಮ್ಮ ರಾಶಿಫಲ ಹೇಗಿದೆ....? - 29 February 2020 Etv Bharat Horoscope

ಶನಿವಾರದ ರಾಶಿಫಲ

29 February 2020 Astrology
29 ಫೆಬ್ರವರಿ 2020 ರಾಶಿಫಲ

By

Published : Feb 29, 2020, 5:01 AM IST

ಮೇಷ

ನಿಮ್ಮ ನಿಜವಾದ ಮೌಲ್ಯವೇನೆಂದು ನೀವು ಪ್ರದರ್ಶಿಸಲು ಇಂದು ಸೂಕ್ತವಾದ ದಿನದಂತೆ ಕಾಣುತ್ತದೆ. ಕೆಲಸದ ವಿಷಯದಲ್ಲಿ, ಮಹತ್ತರ ಪ್ರಸ್ತಾವನೆಗಳು ಮತ್ತು ಸೃಜನಶೀಲ ಆಲೋಚಗಳಿಂದ ನೀವು ಅತ್ಯಂತ ಉತ್ಸುಕರಾಗಿರುತ್ತೀರಿ. ವಿಷಯಗಳು ಸರಾಗವಾಗಿ ಮುನ್ನಡೆಯದ ತಾತ್ಕಾಲಿಕ ಹಂತವಿರಬಹುದು, ಆದರೆ ಅದರಿಂದ ನೀವು ಭರವಸೆ ಕಳೆದುಕೊಳ್ಳಬೇಕೆಂದು ಅರ್ಥವಲ್ಲ. ನಿಮ್ಮ ಜೀವನದಲ್ಲಿ ಪ್ರವೇಶಿಸುವ ಋಣಾತ್ಮಕತೆಯನ್ನು ಹೊರದೂಡುವಲ್ಲಿ ನೀವು ಯಶಸ್ವಿಯಾದರೆ ನಿರಾಶೆ ಶಾಶ್ವತ ಅತಿಥಿಯಲ್ಲ.

ವೃಷಭ

ಈ ದಿನ ಸುದೀರ್ಘ ಶಾಪಿಂಗ್​​​​​ನಲ್ಲಿ ತೊಡಗಿಕೊಳ್ಳುವ ದಿನದಂತೆ ಕಾಣುತ್ತದೆ. ನೀವು ಮಾಲ್, ಮಾರ್ಕೆಟ್, ಡಾಲರ್ ಮಳಿಗೆಗಳು ಮತ್ತು ಬಾರ್ಗೇನ್ ಕೌಂಟರ್​​​​​​​​​​​​​​​​​​​​​​ಗಳಿಗೆ ಸುತ್ತು ಹಾಕುತ್ತೀರಿ. ಬೆಲೆಗಳ ಕುರಿತು ಚೌಕಾಸಿ ಮಾಡುವಲ್ಲಿ, ನಿಮ್ಮ ಕೊಳ್ಳುವಿಕೆಗೆ ಅತ್ಯುತ್ತಮ ಡೀಲ್​​​​​​​ ಪಡೆಯುವಲ್ಲಿ ನೀವು ಸಂತೋಷವಾಗಿ ತೊಡಗಿಕೊಳ್ಳುತ್ತೀರಿ. ನೀವು ಶಾಪಿಂಗ್ ಮುಗಿಸುವ ಮುನ್ನ ಅಪಾರ ಪ್ರಮಾಣದಲ್ಲಿ ಕೊಂಡಿರುತ್ತೀರಿ.

ಮಿಥುನ

ನಿಮ್ಮ ಆಕ್ರಮಣಕಾರಿ ಸ್ವಭಾವದಿಂದ ನೀವು ಜನರೊಂದಿಗೆ ವಾದವಿವಾದದಲ್ಲಿ ಸಿಲುಕಿಕೊಳ್ಳುತ್ತೀರಿ. ಈ ಜನರು ನಿಮ್ಮ ಶತ್ರುತ್ವದಿಂದಾಗಿ ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರುತ್ತಾರೆ. ಆದಾಗ್ಯೂ, ನೀವು ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೀರಿ. ಅವರು ನಿಮ್ಮ ಬೌದ್ಧಿಕ ಔನ್ನತ್ಯದಿಂದ ಕೈ ಚೆಲ್ಲಬೇಕಾಗುತ್ತದೆ, ಎಚ್ಚರದಿಂದಿರಿ.

ಕರ್ಕಾಟಕ

ನೀವು ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ. ಅವರೊಂದಿಗೆ ಸಂತೋಷದ ಸಮಯ ನಿಮ್ಮದಾಗುತ್ತದೆ, ಆದರೆ ಕೆಲ ಚಿಂತೆ ಅಥವಾ ಒತ್ತಡ ನಿಮ್ಮನ್ನು ಹಿಂದಕ್ಕೆಳೆಯುತ್ತದೆ. ಆದಾಗ್ಯೂ, ಈ ಎಲ್ಲಾ ಚಿಂತೆಗಳು ನೀವು ಸಂಜೆ ನಿಮ್ಮ ಮಿತ್ರರೊಂದಿಗೆ ನಿರಾಳತೆ ಅನುಭವಿಸುವಾಗ ದೂರ ಹೋಗುತ್ತವೆ.

ಸಿಂಹ

ಇಂದು, ನಿಮ್ಮ ಜೀವನವಿಡೀ ನೀವು ಕಾಯುತ್ತಿದ್ದ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವಿದೆ. ನಿಮ್ಮ ಸಂಗಾತಿಗೆ ಸುಂದರ ಉಡುಗೊರೆ ನೀಡುವ ಸಾಧ್ಯತೆ ಇದೆ. ನೀವು ಕಲೆಯ ಕುರಿತು ಹೆಚ್ಚು ಗಮನ ನೀಡುತ್ತೀರಿ ಮತ್ತು ಈ ಹೊಸದಾಗಿ ಬಂದಿರುವ ಶ್ಲಾಘನೆಯನ್ನು ಗರಿಷ್ಠ ಮಟ್ಟದಲ್ಲಿ ಪ್ರದರ್ಶಿಸಲು ಸಮರ್ಥರಾಗುತ್ತೀರಿ.

ಕನ್ಯಾ

ಹಿಂದೆ ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳಿಗೆ ನಿಮಗೆ ಇಂದು ಪುರಸ್ಕಾರ ಲಭಿಸುತ್ತದೆ. ನೀವು ಇತರರಿಂದ ಆದೇಶ ಪಡೆಯುವ ಬದಲಿಗೆ ನಿಮ್ಮದೇ ರೀತಿಯಲ್ಲಿ ಕೆಲಸಗಳನ್ನು ನಿಭಾಯಿಸುತ್ತೀರಿ. ಆದಾಗ್ಯೂ, ಅತಿಯಾದ ಅಧಿಕಾರ ಚಲಾಯಿಸುವುದು ಒಳ್ಳೆಯದಲ್ಲ, ಶಾಂತ ಮತ್ತು ಸಮಚಿತ್ತತೆಯಿಂದ ಇರುವುದು ಉತ್ತಮ.

ತುಲಾ

ನಿಮ್ಮ ಮಕ್ಕಳು ಮಾಡುವ ಸಾಧನೆ ನಿಮಗೆ ಅವರ ಕುರಿತು ಹೆಮ್ಮೆಯ ಭಾವನೆ ಮೂಡಿಸುತ್ತದೆ. ನೀವು ಹಣಕಾಸಿನ ಅನುಕೂಲವನ್ನು ವೇತನ ಹೆಚ್ಚಳ ಅಥವಾ ಪಿತ್ರಾರ್ಜಿತವಾಗಿ ಪಡೆಯುತ್ತೀರಿ. ರಿಯಲ್ ಎಸ್ಟೇಟ್ ಅಥವಾ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಗಮನಾರ್ಹ ಗಳಿಕೆ ಪಡೆಯುತ್ತೀರಿ.

ವೃಶ್ಚಿಕ

ನಿಮ್ಮ ಜೀವನದಲ್ಲಿ ಮತ್ತೊಂದು ಸಾಧಾರಣ ದಿನವಾಗಿದ್ದು, ಉತ್ಸಾಹ ಹುಟ್ಟಿಸುವ ಯಾವುದೂ ನಿಮಗಾಗಿ ಇಲ್ಲ. ಆದಾಗ್ಯೂ, ಉತ್ಸಾಹದಿಂದಿರಿ ಮತ್ತು ಜೀವನಕ್ಕೆ ಕೊಂಚ ಬದಲಾವಣೆ ತರಲು ಪ್ರಯತ್ನ ನಡೆಸುತ್ತಲೇ ಇರಿ. ಗ್ರಹಗಳು ತಮ್ಮ ಮನಸ್ಥಿತಿ ಎಂದು ಬದಲಾಯಿಸಿಕೊಳ್ಳುತ್ತವೆ ಹಾಗೂ ಉತ್ಸಾಹದ ಭವಿಷ್ಯ ರೂಪಿಸುತ್ತವೆ ಎಂದು ನಿಮಗೆ ಗೊತ್ತಿಲ್ಲ. ಭರವಸೆಯನ್ನು ಜೀವಂತವಾಗಿರಿಸಿ.

ಧನು

ಕಷ್ಟ ಪಡದಿದ್ದರೆ ಫಲ ದೊರೆಯುವುದಿಲ್ಲ. ಆದ್ದರಿಂದ, ನಿಮ್ಮ ಕೆಲಸದಲ್ಲಿ ನೀವು ಅಪಾರ ತಳಮಳ ಎದುರಿಸಿದರೆ ಮತ್ತು ಕಷ್ಟ ಪಟ್ಟರೆ, ಅದಕ್ಕೆ ಪ್ರತಿಫಲ ಖಂಡಿತವಾಗಿಯೂ ಉತ್ತಮವಾಗಿರುತ್ತದೆ. ಎಲ್ಲರೂ ಒಟ್ಟಿಗೆ ಸೇರಲು ಮತ್ತು ಬಂಧುಮಿತ್ರರೊಂದಿಗೆ ಸಂಜೆಯ ಸಂತೋಷ ಕೂಟ ನಡೆಸಲು ಇದು ಸಕಾಲ. ಒಟ್ಟಿನಲ್ಲಿ, ಸಾಕಷ್ಟು ವಿನೋದಮಯ ಚಟುವಟಿಕೆಯ ದಿನವಾಗಿದೆ.

ಮಕರ

ಮೊದಲ ಪ್ರಯತ್ನದಲ್ಲಿ ನೀವು ಯಶಸ್ವಿಯಾಗದೇ ಇದ್ದರೆ, ಮತ್ತೆ ಪ್ರಯತ್ನಿಸಿರಿ. ಹಲವು ಮಂದಿ ಅವಿರತ ಪ್ರಯತ್ನ ಮತ್ತು ತಾಳ್ಮೆಯ ಶಕ್ತಿಯನ್ನು ಕಡಿಮೆ ಅಂದಾಜು ಮಾಡುತ್ತಾರೆ. ಆದರೆ ಈ ಎರಡೂ ಗುಣಗಳು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಕೋಪ ಮತ್ತು ಆತಂಕದಿಂದ ಸಿಡಿಯುವ ಬದಲಿಗೆ, ನಿಮ್ಮ ಯೋಜನೆಗಳ ಮೇಲೆ ಅದರಲ್ಲೂ ನಿಮ್ಮ ಯೋಜನೆಯಂತೆ ಫಲಿತಾಂಶಗಳು ಬಾರದೇ ಇರುವಾಗ ದೃಢವಾದ ನಂಬಿಕೆ ಇರಿಸಿ.

ಕುಂಭ

ವಿಷಯಗಳು ನಿಂತ ನೀರಾಗಿವೆ, ಆದರೆ ನಿಮ್ಮ ಸ್ಫೂರ್ತಿಯನ್ನು ಅಲ್ಲಾಡಿಸಲು ವಿಫಲವಾಗಿವೆ. ನಿಧಾನ ಮತ್ತು ಸ್ಥಿರವಾದ ಪ್ರಯತ್ನದಿಂದ ಖಂಡಿತ ಗೆಲುವು ಸಾಧ್ಯ, ಮತ್ತು ನೀವು ಅದನ್ನು ಚೆನ್ನಾಗಿ ಗ್ರಹಿಸಿದ್ದೀರಿ. ನಿಮ್ಮ ದಾರಿಯಲ್ಲಿ ದೊರೆಯುವ ಅವಕಾಶಗಳನ್ನು ಹಿಡಿದುಕೊಳ್ಳಲು ಶಕ್ತರಾಗುತ್ತೀರಿ ಮತ್ತು ನಿಮ್ಮ ದಾರಿಯಲ್ಲಿ ಮುನ್ನಡೆಯುತ್ತೀರಿ. ಆರ್ಥಿಕವಾಗಿ ನೀವು ಸ್ಥಿರವಾಗಿದ್ದೀರಿ.

ಮೀನ

ನಿಮ್ಮ ವೆಚ್ಚಗಳು ನಿಮ್ಮ ಆದಾಯ ಅಥವಾ ಲಾಭಕ್ಕಿಂತ ಎರಡು ಪಟ್ಟಾಗಬಹುದು. ಹಣಕಾಸಿನ ವಿಷಯಗಳಲ್ಲಿ ನೀವು ಹೆಚ್ಚು ಎಚ್ಚರಿಕೆ ವಹಿಸಬೇಕು. ಯಾವುದೇ ಹೊಸ ಕೆಲಸ, ಹೊಸ ವ್ಯವಹಾರ ಅಥವಾ ಪ್ರಾರಂಭಗಳಿಗೆ ಇದು ಪವಿತ್ರ ದಿನವಲ್ಲ. ಎರಡು ದಿನಗಳು ಅಥವಾ ನಂತರದಲ್ಲಿ ವಿಷಯಗಳು ನಿಚ್ಚಳವಾಗಲಿವೆ.

ABOUT THE AUTHOR

...view details