ಕರ್ನಾಟಕ

karnataka

ETV Bharat / bharat

ಭೀಕರ ಅಪಘಾತ: ಹೈವೇಯಿಂದ ನಾಲೆಗೆ ಉರುಳಿದ ಬಸ್​, 29 ಮಂದಿ ದುರ್ಮರಣ - ಅಪಘಾತ

ಉತ್ತರ ಪ್ರದೇಶದ ಆಗ್ರಾ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್​ ನಾಲೆಗೆ ಉರುಳಿಬಿದ್ದಿದ್ದು, 29 ಮಂದಿ ಸಾವನ್ನಪ್ಪಿದ್ದಾರೆ.

ಯಮುನಾ ಎಕ್ಸ್​ಪ್ರೆಸ್​ ಹೈವೆಯಿಂದ ನಾಲೆಗೆ ಉರುಳಿದ ಬಸ್​

By

Published : Jul 8, 2019, 8:49 AM IST

ಆಗ್ರಾ (ಉತ್ತರ ಪ್ರದೇಶ):ಲಖನೌ ನಿಂದ ದೆಹಲಿಗೆ ತೆರಳುತ್ತಿದ್ದ ಉತ್ತರ ಪ್ರದೇಶದ ಸರ್ಕಾರಿ ಬಸ್ ಆಗ್ರಾ ಬಳಿ​ ಯಮುನಾ ಎಕ್ಸ್​ಪ್ರೆಸ್​ ಹೈವೇಯಿಂದ ಜರ್ನಾ ನಾಲೆಗೆ ಉರುಳಿಬಿದ್ದ ಪರಿಣಾಮ 29 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಯಮುನಾ ಎಕ್ಸ್​ಪ್ರೆಸ್​ ಹೈವೇಯಿಂದ ನಾಲೆಗೆ ಉರುಳಿದ ಬಸ್​

ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಪೊಲೀಸರು, ಲಖನೌ ನಿಂದ ದೆಹಲಿಗೆ ತೆರಳುತ್ತಿದ್ದ ಸ್ಲೀಪಿಂಗ್​ ಕೋಚ್​ ಬಸ್​ 15 ಅಡಿ ಆಳದ ನಾಲೆಗೆ ಉರುಳಿ ಬಿದ್ದಿದೆ. 20 ಜನರನ್ನ ರಕ್ಷಣೆ ಮಾಡಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ವಿಷಯ ತಿಳಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೃತರಿಗೆ ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಎಲ್ಲಾ ವೈದ್ಯಕೀಯ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.

ABOUT THE AUTHOR

...view details